Home ಕೃಷಿ/ವಾಣಿಜ್ಯ ಸತತ 7ನೇ ಬಾರಿಗೆ ರೆಪೋ ದರ ಯಥಾಸ್ಥಿತಿ

ಸತತ 7ನೇ ಬಾರಿಗೆ ರೆಪೋ ದರ ಯಥಾಸ್ಥಿತಿ

0

ಆರ್‌ಬಿಐ ರೆಪೊ ದರ ಮೊದಲಿನಷ್ಟೇ ಅಂದ್ರೆ 6.50% ರಲ್ಲೇ ಉಳಿಯಲಿದೆ, ಕೊನೆಯದಾಗಿ ಕಳೆದ ವರ್ಷ ಫೆಬ್ರವರಿ 8, 2023 ರಂದು ರೆಪೋ ದರವನ್ನು ಹೆಚ್ಚಿಸಿದೆ

ನವದೆಹಲಿ: ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದು, ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಬದಲಾಯಿಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದಾರೆ. 2024-25ರ ಹಣಕಾಸು ವರ್ಷದ ಮೊದಲನೇ ವಿತ್ತೀಯ ನೀತಿಯ ಅಡಿಯಲ್ಲಿ, ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೊ ದರವನ್ನು ಹೆಚ್ಚಿಸದಿರುವ ಬಗ್ಗೆ ಇಂದು ಮಾಹಿತಿ ನೀಡಿದ್ದಾರೆ. ಈಗ ಆರ್‌ಬಿಐ ರೆಪೊ ದರ ಮೊದಲಿನಷ್ಟೇ ಅಂದ್ರೆ 6.50% ರಲ್ಲೇ ಉಳಿಯಲಿದೆ, ಕೊನೆಯದಾಗಿ ಕಳೆದ ವರ್ಷ ಫೆಬ್ರವರಿ 8, 2023 ರಂದು ರೆಪೋ ದರವನ್ನು ಹೆಚ್ಚಿಸಿದೆ

Exit mobile version