ಬಳ್ಳಾರಿ: ಮತದಾನ ಮುಕ್ತಾಯವಾದ ಸಂಜೆ ೬ ಗಂಟೆ ಬಳಿಕವೂ ಸಂಡೂರು ತಾಲೂಕಿನ ಏಳು ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರಿದಿದೆ.
ಕುಡಿತಿನಿಯ ಮೂರು ಕಡೆ ಮತ್ತು ಸಂಡೂರಿನ ಕೃಷ್ಣಾನಗರ ಸೇರಿ ಒಟ್ಟು ಏಳು ಕಡೆಗಳಲ್ಲಿ ಮತದಾನ ನಡೆಯಿತು. ಮತಗಟ್ಟೆ ಒಳಗೆ ಇರುವ ಸಿಬ್ಬಂದಿಗೆ ಮಾತ್ರ ವೋಟ್ ಚಲಾಯಿಸಲು ಅನುಕೂಲ ಮಾಡಿಕೊಡಲಾಯಿತು. ಮತದಾನ ಕೇಂದ್ರದ ಹೊರಗೆ ಮತ ಚಲಾಯಿಸಲು ಆಗಮಿಸಿದವರನ್ನು ವಾಪಸ್ ಕಳುಹಿಸಲಾಯಿತು.