Home ಕೃಷಿ/ವಾಣಿಜ್ಯ ಕೃಷಿ ಮೇಳ: ಹವಾಮಾನ ಚತುರ ಡಿಜಿಟಲ್ ಕೃಷಿ

ಕೃಷಿ ಮೇಳ: ಹವಾಮಾನ ಚತುರ ಡಿಜಿಟಲ್ ಕೃಷಿ

0

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಜಿಕೆವಿಕೆ ಆವರಣದಲ್ಲಿ ನಾಳೆಯಿಂದ 17ರವರೆಗೂ ಈ ಬಾರಿಯ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದು ಕುಲಪತಿ ಡಾ.ಎಸ್. ವಿ. ಸುರೇಶ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿರುವ ಕೃಷಿ ಮೇಳದಲ್ಲಿ ವಿವಿಧ ಹೊಸ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಕೃಷಿ ಯಂತ್ರೋಪಕರಣಗಳು ಪ್ರದರ್ಶನ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ಮತ್ತಿತರ ವ್ಯವಸ್ಥೆಗಳ ಮೂಲಕ ಆಧುನಿಕ ಬೇಸಾಯದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಕೃಷಿ ಮೇಳದಲ್ಲಿ ಡಿಜಿಟಲ್ ಕೃಷಿ ತಂತ್ರಜ್ಞಾನಗಳ ಬಳಕೆ, ಕೃಷಿ ಡ್ರೋಣ್, ರೋಬೋಟಿಕ್ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣ ಯಂತ್ರ, ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟಾವೇಟರ್, ಸೌರಶಕ್ತಿಚಾಲಿತ ಬರ್ಡ್ ಸ್ಕೇರರ್ ಸೇರಿದಂತೆ ಹಲವು ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತಿದೆ ಎಂದರು.

Exit mobile version