ಸಂಕಷ್ಟಕ್ಕೆ ಸಿಲುಕಲಿದೆ ಮನುಕುಲ

0
19

ಹುಬ್ಬಳ್ಳಿ: ಯುಗಾದಿಯ ನಂತರದ ದಿನಗಳಲ್ಲಿ ಅತೀವೃಷ್ಟಿಯಿಂದ ಮನುಕುಲ ಸಂಕಷ್ಟಕ್ಕೆ ಸಿಲುಕಲಿದೆ. ಕೆಲ ದಿನಗಳ ಬಳಿಕ ಭಗವಂತನ ಕೃಪೆಯಿಂದ ಎಲ್ಲವೂ ಸುಕಾಂತ್ಯಗೊಳ್ಳಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಇಬ್ಬರು ದೊಡ್ಡ ನಾಯಕರ ಜೀವಕ್ಕೆ ಗಂಡಾಂತರವಿದೆ. ಸನ್ಯಾಸಿಯೊಬ್ಬರ ಜೀವಕ್ಕೆ ಆಪತ್ತು ಬರಲಿದೆ. ವಿದೇಶಗಳಲ್ಲಿ ಆಗುವ ಕೆಲ ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧ ಭೀತಿ ಎದುರಾಗಲಿದೆ. ಅಕಾಲಿಕ ಮಳೆಯಿಂದ ಬೆಳೆ, ಪ್ರಾಣ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.
ಭೂಮಿ ನಡುಗುವಿಕೆ, ಆಕಾಶದಲ್ಲಿ ಕೆಲ ವಿಸ್ಮಯಗಳು ನಡೆಯಲಿದ್ದು, ಅಣು ಬಾಂಬ್ ಪ್ರಯೋಗವಾಗುವ ಸಾಧ್ಯತೆಗಳು ದಟ್ಟವಾಗಿದೆ. ಆಶಾದಾಯಕ ದಿನಗಳು ಬಹಳ ಕಡಿಮೆ ಇದ್ದು, ಕಷ್ಟಕರ ದಿನಗಳೇ ಹೆಚ್ಚಾಗಿವೆ. ದೇವರ ಪೂಜೆ, ಪುನಸ್ಕಾರದಿಂದ ಕಷ್ಟಕಾರ್ಪಣ್ಯಗಳು ಮಂಜಿನಂತೆ ಕರಗಲಿವೆ ಎಂದರು.

Previous articleಹೆದ್ದಾರಿ ದೇಶದ ಅಭಿವೃದ್ಧಿಗೆ ರಾಜಮಾರ್ಗ
Next articleಯಾರು ಏನೇ ಹೇಳಿದರೂ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಖಚಿತ