ಶ್ರೀಕಾಂತ ಪೂಜಾರಿ ನೋಬೆಲ್ ಪ್ರಶಸ್ತಿ ವಿಜೇತರಾ?

0
29

ಹುಬ್ಬಳ್ಳಿ: ರಾಜ್ಯ ಸರ್ಕಾರ ಐಸಿಸ್ ರೀತಿಯಲ್ಲಿ ಆಡಳಿತ ಮಾಡುತ್ತಿದೆ ಎನ್ನುವ ಆರೋಪಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶ್ರೀಕಾಂತ ಪೂಜಾರಿ ಏನು ನೋಬೆಲ್ ಪ್ರಶಸ್ತಿ ವಿಜೇತನಾ? ಎಂದು ಪ್ರಶ್ನಿಸಿದರು.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಐಸಿಸ್ ಸ್ಟೇಟ್ ಎನ್ನುವುದಕ್ಕೆ ಇವರಿಗೆ ನಾಚಿಕೆಯಾಗಬೇಕು. ಶ್ರೀಕಾಂತ ಪೂಜಾರಿ ಬಂಧನ ವಿಚಾರದಲ್ಲಿ ರಾಜ್ಯಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎನ್ನುವುದಾದರೇ ಶ್ರೀಕಾಂತ ಪೂಜಾರಿ ವಿರುದ್ಧ ಎಷ್ಟು ಕೇಸ್ ಇವೆ ಎನ್ನುವುದನ್ನು ತಿಳಿದುಕೊಳ್ಳಲಿ. ಆತನ ವಿರುದ್ಧ ಪ್ರಕರಣಗಳಿವೆ. ಶ್ರೀಕಾಂತ ಪೂಜಾರಿ ನೋಬೆಲ್ ಪ್ರಶಸ್ತಿ ವಿಜೇತರಾ? ಬಿಜೆಪಿಯವರಿಗೆ ಹಾಗೂ ಇದರ ಬಗ್ಗೆ ಮಾತನಾಡುವವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous articleಅಭಿಮಾನದ ಹುರುಪಿನಲ್ಲಿ ಯುವಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರ್ದೈವಕರ
Next article26 ರಿಂದ “ಸಂವಿಧಾನ ಜಾಗೃತಿ ಜಾಥಾ”