ಅಹಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಮೃತಪಟ್ಟಿದ್ದಾರೆ.
ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲುತ್ತಿದ್ದ ಅವರು ವಿಮಾನಿನ 12ನೇ ಸೀಟಿನಲ್ಲಿ ಕುಳಿತುಕೊಂಡಿದ್ದರು.
ಇಬ್ಬರು ಪೈಲಟ್ ಹಾಗೂ 10 ಸಿಬ್ಬಂದಿ ಸೇರಿ ಒಟ್ಟು 242 ಜನರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗಾಗಲೇ 100ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದ್ದು, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.