Home ಅಪರಾಧ ವಿದ್ಯಾರ್ಥಿನಿಲಯಕ್ಕೆ ಬೆಂಕಿ: ಓರ್ವನಿಗೆ ಗಂಭೀರ ಗಾಯ

ವಿದ್ಯಾರ್ಥಿನಿಲಯಕ್ಕೆ ಬೆಂಕಿ: ಓರ್ವನಿಗೆ ಗಂಭೀರ ಗಾಯ

0

ವಿಜಯಪುರ(ಮುದ್ದೇಬಿಹಾಳ): ಏಕಾಏಕಿ ಹತ್ತಿದ ಬೆಂಕಿಯಿಂದಾಗಿ ವಿದ್ಯಾರ್ಥಿ ನಿಲಯದ ಕೊಠಡಿಯೊಂದು ಸಂಪೂರ್ಣ ಸುಟ್ಟು ಒಬ್ಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿರುವ ಸಮರ್ಥ ಭಜಂತ್ರಿ ಎಂಬ ವಿದ್ಯಾರ್ಥಿಯನ್ನು ವಿಜಯಪುರದ ಬಿಎಲ್‌ಡಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಾರ್ಜುನ ಭಜಂತ್ರಿ ಮತ್ತು ಸಾಗರ ಕಡಕೋಳ ಎಂಬ ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ನಾಲತವಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Exit mobile version