Home ಅಪರಾಧ ಬಣವೆಗೆ ಬೆಂಕಿ, ಆರಿಸಲು ಹೋದ ರೈತ ಸಜೀವ ದಹನ

ಬಣವೆಗೆ ಬೆಂಕಿ, ಆರಿಸಲು ಹೋದ ರೈತ ಸಜೀವ ದಹನ

0

ಹಾವೇರಿ(ಸವಣೂರ): ಮೇವಿನ ಬಣವೆಗೆ ಹತ್ತಿದ್ದ ಬೆಂಕಿ ನಂದಿಸಲು ಹೋಗಿ ರೈತನೋರ್ವ ಸಜೀವ ದಹನಗೊಂಡ ಘಟನೆ ತಾಲೂಕಿನ ಶಿರಬಡಗಿ ಗ್ರಾಮದ ಸೇವಾಲಾಲಪುರ ತಾಂಡಾದಲ್ಲಿ ನಡೆದಿದೆ. ಸಜೀವ ದಹನಗೊಂಡ ರೈತನನ್ನು ಗಂಗಪ್ಪ ಮಂಗಲೆಪ್ಪ ಲಮಾಣಿ(೬೮) ಎಂದು ಗುರುತಿಸಲಾಗಿದೆ.
ಮೇವಿನ ಬಣವೆಗೆ ಬೆಂಕಿ ತಗುಲಿದ್ದನ್ನು ಕಂಡ ರೈತ ಗಂಗಪ್ಪ, ಬೆಂಕಿಯನ್ನು ನಂದಿಸಲು ಮುಂದಾಗಿದ್ದಾನೆ. ಬಣವೆಗೆ ಹೊದಿಸಿದ ತಾಡಪತ್ರೆಗೂ ಬೆಂಕಿ ತಗಲಿದ್ದು, ಇದನ್ನು ಲೆಕ್ಕಿಸದ ಗಂಗಪ್ಪ ನೀರಿನ ಕೊಡವನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಆತನ ಮೇಲೆ ತಾಡಪತ್ರೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೇವಿನ ಬಣವೆಯ ಸಮೇತ ಸುಟ್ಟು ಕರಕಲಾಗಿದ್ದಾನೆ.

Exit mobile version