ವಿಜಯಪುರ ಬಳಿ ಅಪಘಾತ 3 ಸಾವು: ಸಚಿವ ಪಾಟೀಲ್‌ ಸಂತಾಪ

0
30

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ನಡೆದಿತ್ತು. ಈ ಕುರಿತಂತೆ ಸಚಿವ ಎಂ. ಬಿ. ಪಾಟೀಲ್‌ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮರಣ ಹೊಂದಿರುವ ಧಾರುಣ ಘಟನೆಯ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಾಹನ ಚಲಿಸುವಾಗ ಜಾಗರೂಕರಾಗಿರಿ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಎಲ್ಲಿಯೂ ಸಂಭವಿಸದಿರಲಿ ಎಂದಿದ್ದಾರೆ.

Previous articleಕಲಬುರಗಿ ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ
Next articleಫೈನಾನ್ಸ್‌ ಸಾಲ: ಬಾಣಂತಿ, ಹಸುಗೂಸನ್ನು ಹೊರಗೆ ಹಾಕಿ ಮನೆ ಜಪ್ತಿ