ವಿಜಯಪುರ : ನಗರದ ವಾರ್ಡ್ ನಂ. 17 ರ ವ್ಯಾಪ್ತಿಯ ಮುವನೇಶ್ವರ ಕಾಲೋನಿಯಲ್ಲಿ ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಅಂದರೆ 05-01-2025 ರ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದ್ದು ಅಲ್ಲಿನ ನಿವಾಸಿಗಳು ಹಾಗೂ ನ್ಯಾಷನಲ್ ಹೈವೇ ವಾಹನ ಚಾಲಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಬೆಂಗಳೂರ-ಸೋಲಾಪುರ್ ಹೈವೆಯ ಸರ್ವಿಸ್ ರಸ್ತೆಯಲ್ಲಿ ರಾಜಾರೋಷವಾಗಿ ಮಲಗಿ ವಾಹನ ಸವಾರರನ್ನು ದುರುಗುಟ್ಟಿ ನೋಡುತ್ತಾ ವಾಹನ ಸವಾರರಲ್ಲಿ ಭಯ ಹುಟ್ಟಿಸಿದೆ. ಇನ್ನೂ ಮುನೇಶ್ವರ ಕಾಲೋನಿ, ಅಲ್ಲಾಪುರ ತಾಂಡಾ, ಯೋಗಾಪುರ, ಹಮಾಲ ಕಾಲೋನಿ, ಜೈ ಕರ್ನಾಟಕ ಕಾಲೋನಿಗಳ ಜನ ಚಿರತೆ ಭಯಕ್ಕೆ ಕಂಗಾಲ್ ಆಗಿದ್ದು, ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿದ್ದು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದೆ.