Home News ವಾಣಿಜ್ಯನಗರಿಯಲ್ಲಿ ಮುಂದುವರಿದ ವರುಣಾರ್ಭಟ

ವಾಣಿಜ್ಯನಗರಿಯಲ್ಲಿ ಮುಂದುವರಿದ ವರುಣಾರ್ಭಟ

ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬುಧವಾರವೂ ರಭಸದಿಂದ ಸುರಿಯಿತು.
ನಗರದ ಪ್ರಮುಖ ಕೆರೆಯಾದ ಉಣಕಲ್ ಕೆರೆ ಭರ್ತಿಯಾಗಿ ನೀರು ಕೋಡಿ ಮೇಲೆ ಹರಿಯಿತು.
ಹುಬ್ಬಳ್ಳಿ-ಧಾರವಾಡ ಸಂಪರ್ಕ ರಸ್ತೆಯಲ್ಲಿ, ನಗರದ ಹೃದಯಭಾಗದ ರಸ್ತೆ, ಬಡಾವಣೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ, ಜನ ಸಂಚಾರಕ್ಕೆ ಅಡಚಣೆಯಾಯಿತು. ಸತತ ಮಳೆಗೆ ನಾಲಾಗಳು, ಚರಂಡಿಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಕೆರೆ ಸ್ವರೂಪ ಪಡೆದಿದ್ದ ನಗರದ ನೆಹರು ಮೈದಾನಕ್ಕೆ ಬುಧವಾರ ಮತ್ತಷ್ಟು ಮಳೆ ನೀರು ನುಗ್ಗಿತ್ತು.

Exit mobile version