ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರ ಬಂಧನ

0
25

ಕೋಲಾರ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಘಟನೆ ಇಂದು ಮಧ್ಯಾಹ್ನ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದ್ದು, ಇಬ್ಬರು ಬಾಲಕರನ್ನು ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
15 ಮಂದಿ ಮುಸ್ಲಿಂ ಹುಡುಗರ ಗುಂಪು ಈ ಕೃತ್ಯ ಮಾಡಿದ್ದು, 13 ಹುಡುಗರು ಓಡಿ ಹೋಗಿದ್ದು, ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇಬ್ಬರೂ ಬಾಲಕರು ಅಪ್ರಾಪ್ತರಾಗಿರುವ ಕಾರಣ ಅವರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Previous articleಪಾಕಿಸ್ತಾನದ ಎಲ್ಲ ಡ್ರೋನ್‌ಗಳು ನಾಶ
Next articleಯಕ್ಷಗಾನಕ್ಕೂ ಬಂತು ‘ಆಪರೇಷನ್ ಸಿಂದೂರ’