ಲ್ಯಾಂಡಿಂಗ್‌ ವೇಳೆ ಹೆಲಿಕಾಪ್ಟರ್ ಪತನ

0
42

ಡೆಹ್ರಾಡೂನ್‌: ಕೇದಾರನಾಥ ಬಳಿ ಏರ್ ಆಂಬ್ಯುಲೆನ್ಸ್ ಒಂದು ಲ್ಯಾಂಡಿಂಗ್‌ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡ ಘಟನೆ ನಡೆದಿದೆ.
ತುರ್ತು ವೈದ್ಯಕೀಯ ಸೇವೆಯ ಅಡಿಯಲ್ಲಿ ರೋಗಿಯನ್ನು ಕರೆದೊಯ್ಯಲು ಹೆಲಿಕಾಪ್ಟರ್ ಕೇದಾರನಾಥಕ್ಕೆ ಬರುವ ವೇಳೆ ಪತನಗೊಂಡಿದೆ. ಕೇದಾರನಾಥಕ್ಕೆ ಬರುತ್ತಿದ್ದ ಏರ್ ಆಂಬ್ಯುಲೆನ್ಸ್ ಕೇದಾರನಾಥ ಹೆಲಿಪ್ಯಾಡ್ ಬಳಿ ತಾಂತ್ರಿಕ ದೋಷ ಕಂಡು ಬಂದು ಇನ್ನೂ 20 ಮೀಟರ್‌ ದೂರದಲ್ಲಿರುವಾಗಲೇ ಹೆಲಿಕಾಪ್ಟರ್‌ನ ಹಿಂಭಾಗ ಮುರಿದು ಪತನಗೊಂಡಿದೆ, ಈ ವೇಳೆ ಹೆಲಿಕಾಪ್ಟರ್‌ನಲ್ಲಿ ಪೈಲಟ್, ಓರ್ವ ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿ ಮೂರೂ ಮಂದಿ ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್. ಮೂವರು ಅಪಾಯದಿಂದ ಪಾರಾಗಿದ್ದಾರೆ.

Previous articleಅಕ್ಷತೆ ಬಿದ್ದ‌ ಕೆಲವೇ ಕ್ಷಣದಲ್ಲಿ ಮದುಮಗ ಸಾವು
Next articleಮಯೂರನಿಗೆ ಸುವರ್ಣ ಸಂಭ್ರಮ: ಅಂಕಲಿಯಲ್ಲಿ ತಾರಾ ಮೆರುಗು