ಲೋಕ ಅದಾಲತ್ : ಒಂದಾದ ಮೂವರು ದಂಪತಿಗಳು

0
23

ಮೂವರು ದಂಪತಿಗಳು ಪರಸ್ಪರ ಒಂದಾಗುವಲ್ಲಿ ಬನಹಟ್ಟಿಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರಣವಾಯಿತು.ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ 295 ಪ್ರಕರಣಗಳಲ್ಲಿ 68 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು 1,49,72,694 ಪರಿಹಾರ ಮೊತ್ತವನ್ನು ನೀಡಲಾಯಿತು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಆಶಪ್ಪ ಸಣಮನಿ ತಿಳಿಸಿದರು.

ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ 851 ಪ್ರಕರಣಗಳಲ್ಲಿ 600 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 1,59,52,125 ಪರಿಹಾರ ಮೊತ್ತವನ್ನು ನೀಡಲಾಯಿತು ಎಂದು ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಶುಷ್ಮ ಟಿ.ಸಿ. ತಿಳಿಸಿದರು.

ಮೂರು ಪ್ರಕರಣಗಳಲ್ಲಿ ದಂಪತಿಗಳು ಮತ್ತು ಮಕ್ಕಳು ಒಂದಾಗಿದ್ದು ವಿಶೇಷವಾಗಿತ್ತು. ನ್ಯಾಯಾಧೀಶ ಆಶಪ್ಪ ಸಣಮನಿ ಮಾತನಾಡಿ, ಲೋಕ್ ಅದಾಲತ್ ಯಶಸ್ವಿಗೆ ವಕೀಲರು ಮತ್ತು ಕಕ್ಷಿದಾರರ ಸಹಕಾರ ಬಹಳಷ್ಟು ಮುಖ್ಯವಾಗಿದೆ.

ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಸಾಮರಸ್ಯದಿಂದ ಜೀವನವನ್ನು ಸಾಗಿಸಬಹುದಾಗಿದೆ ಎಂದು ತಿಳಿಸಿದರು.

ಎಂ.ವೈ.ಪಾಟೀಲ ಮತ್ತು ಎನ್.ಎಂ.ತಳವಾರ ಸಂಧಾನಕಾರರಾಗಿದ್ದರು.

ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ಎ.ಜಿ.ಸಲಬನ್ನವರ, ಸಹ ಕಾರ್ಯದರ್ಶಿ ಪಿ.ಜಿ.ಪಾಟೀಲ, ಬಸವರಾಜ ಭೂತಿ, ಬಸವರಾಜ ಪುಟಾಣಿ, ಮಹಾಂತೇಶ ಪದಮಗೊಂಡ, ಬಿ.ಎನ್ ಖಟಾವಕರ, ಬಿ.ಎಂ.ಕಾರ್ವೇಕರ, ಎಸ್.ಎ.ಪಾಟೀಲ, ಎಂ.ಸಿ.ಚೋಳಿ. ಎ.ಜಿ.ಗಾಡಬೋಲೆ, ರವಿ ಸಂಪಗಾಂವಜ ಸೇರಿದಂತೆ ವಕೀಲರು ಇದ್ದರು.

Previous articleಹೊಂಡಗಳ ವಿಡಿಯೋ ವೈರಲ್‌: ಹೊಂಡ ಮುಚ್ಚಲು ಕಾರ್ಯಪ್ರವೃತ್ತ
Next articleನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಪೊಲೀಸರಿಂದ ದಾಳಿ