Home ಕ್ರೀಡೆ ಲೇಟ್ ಕಟ್ ಹೊಡೆತಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಆ ದಿನಗಳು…

ಲೇಟ್ ಕಟ್ ಹೊಡೆತಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಆ ದಿನಗಳು…

0

ಬೆಂಗಳೂರು: ವಿಶ್ವನಾಥ್ ಅವರ ಲೇಟ್ ಕಟ್ ಹೊಡೆತಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಆ ದಿನಗಳು… ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಿಕೆಟ್‌ ಆಟಗಾರ ಜಿ.ಆರ್ ವಿಶ್ವನಾಥ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಜಿ.ಆರ್ ವಿಶ್ವನಾಥ್ ಅವರ ಜನ್ಮದಿನದ ಶುಭಾಶಯಗಳುನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್‌ ಮಾಡಿರುವ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲೆ ಶತಕ ಗಳಿಸಿ ದಾಖಲೆ ನಿರ್ಮಿಸಿದ ಕಲಾತ್ಮಕ ಆಟಗಾರ, ಮಣಿಕಟ್ಟಿನ ಮ್ಯಾಜಿಷಿಯನ್ ಎಂದೆಂದಿಗೂ ಖ್ಯಾತರಾಗಿರುವ ಜಿ.ಆರ್ ವಿಶ್ವನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು. ವಿಶ್ವನಾಥ್ ಅವರ ಲೇಟ್ ಕಟ್ ಹೊಡೆತಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಆ ದಿನಗಳು ಸದಾ ನೆನಪಿಗೆ ಉಳಿಯುವಂತದ್ದು. ದೀರ್ಘ ಆಯಸ್ಸು, ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Exit mobile version