ಹುಮ್ನಾಬಾದ್: ರೈಲ್ಪೆ ಟ್ರ್ಯಾಕ್ ಗೆ ತಲೆಕೊಟ್ಟು ವಿವಾಹಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಹೊರವಲಯದಲ್ಲಿ ಶನಿವಾರ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಭಾಲ್ಕಿ ತಾಲ್ಲೂಕು ಜ್ಯಾಂತಿ ಮೂಲದ ಪಟ್ಟಣದ ಹಣಕುಣಿ ರಸ್ತೆಯ ಸೀಗಿ ಲೈಟ್ ನಿವಾಸಿ ಶಿವರಾಜ ಚಂದ್ರಪ್ಪ ಬಿಲಗುಂದಿ(56) ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿನೀಡಿ ಪರಿಶೀಲಿಸಿದ್ದಾರೆ.


























