ರಾಜಸ್ಥಾನದಲ್ಲಿ ಜಿಲ್ಲೆಯ ಯೋಧ ಸಾವು

0
25

ಬಾಗಲಕೋಟೆ: ಹದಿನಾಲ್ಕು ವಚರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾದಾಮಿ ತಾಲೂಕಿನ ನಂದಿಕೇಶ್ವ ಗ್ರಾಮದ ಯೋಧ ಮಾಗುಂಡಯ್ಯ ಚನ್ನಯ್ಯ ರೇಷ್ಮೆ(೩೭) ಹೃದಯಾಘಾತದಿಂದ ನಿಧನಹೊಂದಿದ್ದಾರೆ.
ಬೆಳಗಾವಿ ಮರಾಠಾ ಇನ್ಫೆಂಟ್ರಿ ಯೂನಿಟ್ ೧೯ರ ಮೆಕಾನಿಕ್ ಸಿ/ಒ ೫೬ ಎಪಿಒ ಬಿಕಾನೇರ್ ಕಾಂಟ್ ರಾಜಸ್ತಾನದಲ್ಲಿ ಮಾಗುಂಡಯ್ಯ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳೊಂದಿಗೆ ರಾಜನಸ್ಥಾನದಲ್ಲೇ ವಾಸವಾಗಿದ್ದರು. ಕರ್ತವ್ಯ ನಿರತರಾಗಿದ್ದ ವೇಳೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜ.೧೫ರ ಬುಧವಾರ ಯೋಧ ಮಾಗುಂಡಯ್ಯ ಅವರ ಅಂತ್ಯ ಸಂಸ್ಕಾರವು ಸ್ವಗ್ರಾಮದ ನಂದಿಕೇಶ್ವರದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

Previous articleಗಣರಾಜೋತ್ಸವ ವೀಕ್ಷಣೆ: ವೆಂಕಪ್ಪ ಸುಗತೇಕರಗೆ ಬುಲಾವ್
Next articleಸಂಕ್ರಾಂತಿಗೆ ಬಂದಿದ್ದ ಅತ್ತೆಯನ್ನೇ ಕೊಲೆಗೈದ ಅಳಿಯ..!