ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

0
7

ಚಿಕ್ಕಮಗಳೂರು : ಶಾರ್ಟ್ ಸರ್ಕ್ಯೂಟ್‌ನಿ‌ಂದ ರಸ್ತೆ ಮಧ್ಯೆ ಕಾರೊಂದು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಸ್ವಿಫ್ಟ್ ಕಾರು ಬೂದಿಯಾಗಿದೆ. ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ಚಿಕ್ಕಮಗಳೂರಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಸುಟ್ಟು ಕರಕಲಾಗಿದೆ.
ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಲ್ವರು ಪ್ರಯಾಣಿಕರು ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಡೂರು ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Previous articleವಾಲ್ಮೀಕಿ ನಿಗಮದ ಹಗರಣಕ್ಕೆ ಮತ್ತೊಬ್ಬ ಸಚಿವರ ಹೆಸರು ತಳುಕು: ಸಿಬಿಐ ಹಸ್ತಾಂತರಕ್ಕೆ ಆಗ್ರಹ
Next articleಪ್ರಧಾನಿಯಾಗಿ ಮೋದಿ 5 ವರ್ಷ ಪೂರೈಸಲ್ಲ