ಯುದ್ಧಕಾಂಡಕ್ಕೆ ಓ ದೇವನೆ ಎಂಬ ಭಾವನಾತ್ಮಾಕ ಗೀತೆ

ಬೆಂಗಳೂರು: ನಟ ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ ಚಿತ್ರದ ಓ ದೇವನೆ ಎಂಬ ಭಾವನಾತ್ಮಾಕ ಗೀತೆ ಬಿಡುಗಡೆಗೊಂಡಿದೆ.
ಪವನ್ ಭಟ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕರಾಗಿಯೂ ಅಜಯ್ ರಾವ್ ಬಡ್ತಿ ಪಡೆದಿದ್ದಾರೆ. ಪವನ್ ಭಟ್ ನಿರ್ದೇಶನದ ಈ ಸಿನಿಮಾದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ.ಎಸ್. ನಾಗಾಭರಣ ಮುಂತಾದವರು ನಟಿಸಿದ್ದಾರೆ.
‘ಯುದ್ಧ ಕಾಂಡ’ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟ-ನಿರ್ದೇಶಕ ರವಿಚಂದ್ರನ್ ಅವರು ಚಿತ್ರದ ಐದು ಗೋಲ್ಡ್ ಕ್ಲಾಸ್ ಟಿಕೆಟ್‌ಗಳನ್ನು ಖರೀದಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಬಹು ನೀರಿಕ್ಷೀತ ಯುದ್ಧಕಾಂಡ ಚಿತ್ರ ಏಪ್ರಿಲ್ 18ರಂದು ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಕೆ. ಬಿ. ಪ್ರವೀಣ್ ಸಂಗೀತ ನೀಡಿದ್ದು, ಪವನ್‌ ಭಟ್‌ ಅವರ ಸಾಹಿತ್ಯವಿದೆ, ಐಶ್ವರ್ಯಾ ರಂಗರಾಜನ್‌ ಹಾಗೂ ಅರಣ ಶೆಟ್ಟಿ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಓ ದೇವನೆ ಹಾಡನ್ನು ನೀವೊಮ್ಮೆ ಕೇಳಿ