ಯಾಳಗಿಯ ಸದ್ಗುರು ರಾಮಪ್ಪಯ್ಯ ಮಠದಲ್ಲಿ ಸಹಸ್ರ ಲಿಂಗಗಳ ಪ್ರತಿಷ್ಠಾಪನೆ

ಕೆಂಭಾವಿ : ಸಮೀಪದ ಯಾಳಗಿಯಲ್ಲಿ ಸದ್ಗುರು ರಾಮಪ್ಪಯ್ಯ ಸಂಸ್ಥಾನ ಮಠದಲ್ಲಿ ಸಹಸ್ರ 1008 ಲಿಂಗಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಪೂಜಾ ಕೈಕಂರ್ಯಗಳೊಂದಿಗೆ ಲಿಂಗಗಳನ್ನು ಪ್ರತಿಷ್ಠಾಪನೆಗೊಳಿಸಲಾಯಿತು. ನಂತರ ಮಾತನಾಡಿದ ಮಠದ ಪೀಠಾಧಿಪತಿ ಚಂದ್ರಶೇಖರ ಮಾಹರಾಜರು ಮಾತನಾಡುತ್ತಾ ನಾಡಿನ ಒಳಿತಿಗಾಗಿ ಹಾಗೂ ಗ್ರಾಮದ ರೈತರ ಒಳಿತಿಗಾಗಿ ಆರೋಗ್ಯ, ಮಳೆ ,ಬೆಳೆ,ಸಮೃದ್ಧಿಯಾಗಲು ಸರ್ವ ಜನ್ಮ ಶಾಂತಿಗಾಗಿ ಶ್ರೀ ಮಠದಲ್ಲಿ ಲಿಂಗಳನ್ನು ಪ್ರತಿಷ್ಠಾಪಿಸಲಾಗಿದೆ ಮಾಹ ಕುಂಬ ಮೇಳದಿಂದ ತಂದ ಗಂಗಾ ಜಲದ ಮೂಲಕ ಅಭಿಷೇಕ ಮಾಡುವ ಮೂಲಕ ನವಗ್ರಹ ಪೂಜೆ ಮಾಡಿ ಸರ್ವರಿಗೂ ಒಳಿತಿಗಾಗಿ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು ,

ಇದೇ ಸಂದರ್ಭದಲ್ಲಿ ಮಠದ ಅಮೃತಭಟ್ ಮಾಹರಾಜ, ಬೀಮಭಟ್ಟ, ರಘುನಾಥ, ವಿಶಾಲ ಜೋಶಿ,ಶ್ರೀಷ ಹೈದಳ,ಲಕ್ಷ್ಮಣರಾವ ಕುಲಕಣಿ, ಗುಂಡುಭಟ್ಟ ಜೋಶಿ, ವಾಮನರಾವ ದೇಶಪಾಂಡೆ,ನರಸಿಂಹರಾವ ಕುಲಕರ್ಣಿ ಚಂದ್ರಚೂಡ ಹೈದಳೆ, ಮಯೂರ ಕುಲಕರ್ಣಿ,ಲಕ್ಷ್ಮಣ, ಮಂಜುನಾಥ ಮಾನ ಇದ್ದರು