Home ತಾಜಾ ಸುದ್ದಿ ಯತ್ನಾಳ ಮರಳಿ ಬಿಜೆಪಿಗೆ ಬಂದೇ ಬರುತ್ತಾರೆ

ಯತ್ನಾಳ ಮರಳಿ ಬಿಜೆಪಿಗೆ ಬಂದೇ ಬರುತ್ತಾರೆ

0

ಬೆಳಗಾವಿ: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ನಾಯಕರು. ಪಕ್ಷಕ್ಕೆ ದುಡಿದ ಯತ್ನಾಳ ಮತ್ತೆ ಬಿಜೆಪಿಗೆ ಮರಳಿ ಬರುತ್ತಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಹೈಕಮಾಂಡ್ ನಾಯಕರೊಂದಿಗೆ ಮಾತನಾಡಿದ್ದೇನೆ. ಆದಷ್ಟು ಶೀಘ್ರದಲ್ಲೇ ಯತ್ನಾಳ ಉಚ್ಚಾಟನೆ ಆದೇಶವನ್ನು ಹೈಕಮಾಂಡ್ ವಾಪಸ್ ಪಡೆಯಲಿದೆ ಎಂಬ ನಂಬಿಕೆ ನನಗಿದೆ ಎಂದರು.
ಯತ್ನಾಳ ಹೊಸ ಪಾರ್ಟಿ ಕಟ್ಟಲ್ಲ: ವಿಜಯಪುರದಲ್ಲಿ ಯತ್ನಾಳ ಅವರು ಮಾತನಾಡಿರುವ ವಿಡಿಯೋ ನೋಡಿದ್ದೇನೆ. ಅವರು ಹೇಳಿದ್ದೇ ಬೇರೆ, ನೀವು ಪತ್ರಿಕೆಯಲ್ಲಿ ಬರದಿದ್ದೇ ಬೇರೆ.. ಯತ್ನಾಳ ಸೇರಿದಂತೆ ನಮ್ಮ ತಂಡ ಯಾವುದೇ ರೀತಿ ಬಿಜೆಪಿ ಬಿಟ್ಟು ಹೋಗುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಟ್ಟ ಘಳಿಗೆ, ಏನೋ ಆಗಿದೆ. ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆಯನ್ನು ರದ್ದು ಮಾಡಿಸುತ್ತೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ಈಗ ಬೇರೇನೂ ಮಾತನಾಡುವುದಿಲ್ಲ. ದಯವಿಟ್ಟು ವಿವಾದ ಮಾಡಬೇಡಿ ಎಂದರು.

Exit mobile version