Home ತಾಜಾ ಸುದ್ದಿ ಮ್ಯಾರಥಾನ್ ಓಟಕ್ಕೆ ಐಜಿಪಿ  ಚಾಲನೆ

ಮ್ಯಾರಥಾನ್ ಓಟಕ್ಕೆ ಐಜಿಪಿ  ಚಾಲನೆ

0


ದಾವಣಗೆರೆ: ಮಂಜು ಮುಸುಕಿನೊಳಗೆ ೫ಕೆ ಮತ್ತು ೧೦ಕೆ ಮ್ಯಾರಥಾನ್ ಓಟದಲ್ಲಿ ಪೊಲೀಸರೊಂದಿಗೆ ನಾಗರಿಕರು ಅತೀ ಉತ್ಸಾಹದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವತಿಯಿಂದ ಎರಡನೇ ಬಾರಿಗೆ ‘ಪೊಲೀಸರೊಂದಿಗೆ ಒಟ’ ೫ಕೆ ಮತ್ತು ೧೦ಕೆ ಮ್ಯಾರಥಾನ್ ಓಟದ ಸ್ಪರ್ಧೆಗೆ ದಾವಣಗೆರೆ ಪೂರ್ವ ವಲಯ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಡಿವೈಎಸ್ಪಿಗಳಾದ ಶರಣ ಬಸವೇಶ್ವರ ಬೀಮರಾವ್, ಬಸವರಾಜ್, ಪ್ರಕಾಶ್ ಇದ್ದರು. ನಂತರ ಪೊಲೀಸರೊಂದಿಗೆ ನಾಗರಿಕರು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು.

Exit mobile version