ಮೋದಿ ಮತ್ತೆ ಪ್ರಧಾನಿ: ಧಾರವಾಡದಲ್ಲಿ ಚಂಡಿಕಾಯಾಗ

0
12

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂಕಲ್ಪ

ಧಾರವಾಡ: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕೆಂಬ ಸಂಕಲ್ಪದೊಂದಿಗೆ ಧಾರವಾಡದ ಶೃಂಗೇರಿ ಶಂಕರ ಮಠದಲ್ಲಿ ಇಂದು ಚಂಡಿಕಾಯಾಗ ನೆರವೇರಿಸಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಕಲ್ಪ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಜೋಶಿ, ಧರ್ಮದ‌ ಗೆಲುವಿಗಾಗಿ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಾಧಾನಿ ಆಗಬೇಕಿದೆ ಎಂದು ಹೇಳಿದರು.

ಧರ್ಮದ ರಕ್ಷಣೆಯೊಂದಿಗೆ ರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತಿರುವ ಮೋದಿಯವರ ನಾಯಕತ್ವ ಈ ದೇಶಕ್ಕೆ ಇನ್ನಷ್ಟು ಕಾಲ ಅವಶ್ಯವಿದೆ. ದೇಶವಾಸಿಗಳ ಸಂಕಲ್ಪವೂ ಇದೇ ಆಗಿದೆ. ಹೀಗಾಗಿ ಮೋದಿಯವರನ್ನು ಮತ್ತೆ ಗೆಲ್ಲಿಸಲು ಜನತೆ ಸಿದ್ಧರಾಗಿದ್ದಾರೆ ಎಂದು ಜೋಶಿ ಹೇಳಿದರು.

ಚಂಡಿಕಾಯಾಗ ಪೂಜೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸಂಜಯ ಕಪಟಕರ್ ಹಾಗೂ ಪ್ರಮುಖರು ಇದ್ದರು.

Previous articleರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ
Next articleದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ