Home ತಾಜಾ ಸುದ್ದಿ ಮೈಸೂರು ನಗರಕ್ಕೆ ನೂತನ ಡಿಸಿಪಿ ನೇಮಕ

ಮೈಸೂರು ನಗರಕ್ಕೆ ನೂತನ ಡಿಸಿಪಿ ನೇಮಕ

0

ಮೈಸೂರು :ಮೈಸೂರು ನಗರದ ಉಪ ಆಯುಕ್ತರಾಗಿದ್ದ ಜಾಹ್ನವಿ ಅವರ ಜಾಗಕ್ಕೆ ಕೊಡಗಿನಲ್ಲಿ ಹೆಚ್ಚುವರಿ ಎಸ್ಪಿಯಾಗಿದ್ದ ಸುಂದರರಾಜ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಧಿಕಾರಿ ಎಸ್.ಜಾಹ್ನವಿ ಅವರನ್ನು ವರ್ಗ ಮಾಡಲಾಗಿದ್ದು. ಯಾವುದೇ ಹುದ್ದೆ ನೀಡದೇ ವರ್ಗ ಮಾಡಲಾಗಿದೆ. ಅವರು ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಎಸ್. ಜಾಹ್ನವಿ 2008 ರ ಬ್ಯಾಚ್‌ನ ಕರ್ನಾಟಕ ರಾಜ್ಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದು, ಈ ಹಿಂದೆ ಬೆಂಗಳೂರು, ಕಲಬುರಗಿ ಮತ್ತು ಕೋಲಾರದಲ್ಲಿ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್), ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ನಂತಹ ವಿಶೇಷ ಘಟಕಗಳಲ್ಲಿ ಕೆಲಸ ಮಾಡಿದ್ದರು.

Exit mobile version