ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

0
15

ಪಾಟ್ನಾ: ಇಂದು ಬೆಳಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಹಾರದ ನಾಯಕ ನಿತೀಶ್ ಕುಮಾರ್ ಇಂದು ಸಂಜೆ ಬಿಹಾರದ ಮುಖ್ಯಮಂತ್ರಿಯಾಗಿ 9ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿಯನ್ನು ಎದುರಿಸಲು ನಿನ್ನೆಯವರೆಗೂ ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದ ನಿತೀಶ್ ಕುಮಾರ್ ಇಂದು ಬಿಹಾರ ಮುಖ್ಯಮಂತ್ರಿಯಾಗಿ ಬಿಜೆಪಿಯೊಂದಿಗೆ ಹೊಸ ಮೈತ್ರಿಕೂಟದ ಪಾಲುದಾರರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಬಿಜೆಪಿಯಿಂದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಮತ್ತು ಇತರೆ ಎಂಟು ಜನ ಶಾಸಕರು ನೂತನ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Previous articleಸಂಸದ ರಮೇಶ ಜಿಗಜಿಣಗಿ ದಿಢೀರ್ ಆಸ್ಪತ್ರೆಗೆ ದಾಖಲು
Next articleಬಗೆಹರಿಯದ ನೇಕಾರ ಬಿಕ್ಕಟ್ಟು-ಪರಿಹಾರಕ್ಕೆ ಹೆಚ್ಚಿದ ಒತ್ತಡ