ನವದೆಹಲಿ: ಮೀಸಲಾತಿ ಮೂಲಭೂತ ಹಕ್ಕಲ್ಲ. ಆದರೆ ಆದರೆ ಸರ್ಕಾರ ಮೀಸ ಲಾತಿ ನೀಡದಿರುವ ತೀರ್ಮಾನ ಕೈಗೊಂಡಾಗ ಅದರಲ್ಲಿ ಕೆಲವೊಂದು ಪರಿಮಾಣಾತ್ಮಕ ಅಂಶಗಳು ಹಾಗೂ ಮಾನ್ಯವಾಗುವ ಕಾರಣಗಳಿರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಸಂದರ್ಭದಲ್ಲಿ ೨೦೦೬ರ ಕರ್ನಾಟಕ ರಾಜ್ಯ ಹಾಗೂ ಉಮಾದೇವಿ ಪ್ರಕರಣವನ್ನೂ ಉಲ್ಲೇಖಿಸಿದೆ. ಅದರಂತೆ ಸಂವಿಧಾನದ ೧೪ ಮತ್ತು ೧೬ನೇ ವಿಧಿಗಳ ಆದೇಶಗಳನ್ನು ಉಲ್ಲಂಘಿಸಿದ ಯಾವುದೇ ನೇಮಕಾತಿಯು ಕಾನೂನು ಪ್ರಕಾರ ಅನೂರ್ಜಿತವಾಗುತ್ತದೆ.