ಹಿಂದಿನ ಚಿತ್ರಣ ಬದಲಾದರು, ನಿಮ್ಮ ನಡವಳಿಕೆ ಮಾತ್ರ ಬದಲಾಗಿಲ್ಲ
ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರು, ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿಯವರು ಮೀಸಲಾತಿಯ ವಿರುದ್ದ ಹೋರಾಡಿದ್ದು ಮರೆತು ಕಾಂಗ್ರೆಸ್ ಪಕ್ಷ ಇಂದು ಏನು ಮಾಡುತ್ತಿದೆ? ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಒಳಜಗಳದಿಂದ ಆಂತರಿಕ ತಾಳ್ಮೆ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸಿದ್ದರಾಮಯ್ಯನವರು ದುರ್ವತನೆ ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ದೃಶ್ಯ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ದಿನನಿತ್ಯದ ಜೀವನ ದುಸ್ಥರ ಮಾಡಿದ ಕಾಂಗ್ರೆಸ್ ಪಕ್ಷ ನಾಚಿಕೆ ಮಾನ ಮರ್ಯಾದೆ ಬಿಟ್ಟು, ಪಿಕ್ ಪಾಕೇಟ್ ಕೆಲಸ ಮಾಡಿ, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದೆ. ದುರಹಂಕಾರದ ಪರಮಾವಧಿ ಮೀರಿದ ಸಿದ್ದರಾಮಯ್ಯನವರ ನಡುವಳಿಕೆ ಖಂಡನೀಯ, ಭಯೋತ್ಪಾದಕರಿಗೆ ತಕ್ಕ ಪಾಠವನ್ನು ಭಾರತ ಕಲಿಸುತ್ತೆ. ಕಾಂಗ್ರೆಸ್ ಪಕ್ಷ ಕಾಶ್ಮೀರದ ಘಟನೆಯನ್ನು ‘ಹಿಂದು ಟೆರರ್’ ಅಂತಾ ಬಾಯಿಗೆ ಬಂದ ಹಾಗೆ ಮಾತನಾಡುತಿದೆ. ಮುಂಬೈ ದಾಳಿಯನ್ನು ಆರ್ಎಸ್ಎಸ್ ಮಾಡಿದ್ದು ಎಂದು ಕಾಂಗ್ರೆಸ್ ಪಕ್ಷ ಈ ಹಿಂದೆ ನೀಚವಾಗಿ ಮಾತನಾಡಿದೆ. ಕಾಶ್ಮೀರದ ಹಿಂದಿನ ಚಿತ್ರಣ ಇದೀಗ ಬದಲಾಗಿದೆ. ನಿಮ್ಮ ನಡವಳಿಕೆ ಮಾತ್ರ ಬದಲಾಗಿಲ್ಲ. ಎಲ್ಲಾ ಬೆಲೆ ಏರಿಕೆಗೆ ಕಾರಣ ಬಿಜೆಪಿ ಅಂತಾರೆ. ನಾಚಿಕೆ ಮಾನ ಮರ್ಯಾದೆ ಬಿಟ್ಟು, ಕಳ್ಳತನ ಮಾಡಿ, ಸುಳ್ಳು ಹೇಳಿ, ದರೋಡೆ -ಹಗಲು ದರೋಡೆ ಮಾಡಿದ ನೀವು, ನಾವು ಸಾಚಾ ಅಂತಿರಾ ಇಷ್ಟು ನಾಚಿಕೆಗೆಟ್ಟವರ ರೀತಿ ಮಾತನಾಡುತ್ತಿರುವುದು ಕಾಂಗ್ರೆಸ್. ಹಣದುಬ್ಬರದ ಬಗ್ಗೆ ಮಾತನಾಡುವುದಕ್ಕು ಮೊದಲು ಒಮ್ಮೆ ಯೋಚನೆ ಮಾಡಿ, ಯಾರಿಗೆ ಮಾನ ಮರ್ಯಾದೆ ಇಲ್ಲ ಹೇಳಿ? ಬಾಬಾ ಸಾಹೇಬರ ಸೋಲನ್ನು ಸಂಭ್ರಮಿಸಿದ್ದು ಕಾಂಗ್ರೆಸ್. ರಾಜ್ಯದಲ್ಲಿರುವ ಎಷ್ಟು ಪಾಕಿಸ್ತಾನದ ಪ್ರಜೆಗಳನ್ನು ರಾಜ್ಯ ಸರ್ಕಾರ ವಾಪಸ್ಸು ಕಳುಹಿಸಿದೆ? ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರನ್ನು ಪಾಕಿಸ್ತಾನ ಸಂಭ್ರಮಿಸುತ್ತಿದೆ. ನಿಮ್ಮ ಮಾತುಗಳು ದೇಶದ್ರೋಹವಲ್ಲವೇ ಸಿದ್ದರಾಮಯ್ಯನವರೇ? ಪ್ರತಿಭಟನಕಾರ ಮಹಿಳೆಯರ ಮೇಲೆ ದರ್ಪ ತೋರಿ, ಮಾನ ಮರ್ಯಾದೆ ಬಗ್ಗೆ ಮಾತನಾಡುತ್ತಿದ್ದೀರಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.