ಹುಬ್ಬಳ್ಳಿ : ನೈಋತ್ಯ ರೈಲ್ವೆಯು ಮಿರಜ್-ಬೆಳಗಾವಿ (ರೈಲು ಸಂಖ್ಯೆ- ೦೭೩೦೨ ) ಕಾಯ್ದಿರಿಸದ ವಿಶೇಷ ಮತ್ತು ರೈಲು ಸಂಖ್ಯೆ ೦೭೩೦೪ ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು ೨೦೨೫ರ ಜೂನ್ ೧೯ ರಿಂದ ಪರಿಷ್ಕರಿಸಿದೆ.
ಅದರಂತೆ, ಮಿರಜ್ – ಬೆಳಗಾವಿ (ರೈಲು ಸಂಖ್ಯೆ ೦೭೩೦೨) ಕಾಯ್ದಿರಿಸದ ವಿಶೇಷ ರೈಲು ಬೆಳಗಾವಿಗೆ ಆಗಮಿಸುವ ಸಮಯವನ್ನು ಈಗಿರುವ ೧೨:೫೦ ಬದಲು ೧ ಗಂಟೆಗೆ ಪರಿಷ್ಕರಿಸಲಾಗಿದೆ. ಅದೇ ರೀತಿ, ಮಿರಜ್ – ಬೆಳಗಾವಿ (ರೈಲು ಸಂಖ್ಯೆ ೦೭೩೦೪ ) ಕಾಯ್ದಿರಿಸದ ವಿಶೇಷ ರೈಲಿನ ಆಗಮನದ ಸಮಯವನ್ನು ಬೆಳಗಾವಿ ನಿಲ್ದಾಣದಲ್ಲಿ ೮.೩೫ ರಿಂದ ೯ ಗಂಟೆಗೆ ಪರಿಷ್ಕರಿಸಲಾಗಿದೆ.
ಈ ಎರಡೂ ರೈಲುಗಳ ಮಿರಜ್ ಮತ್ತು ಸಾಂಬ್ರಾ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬೆಲ್ಲಂಪಲ್ಲಿಯಲ್ಲಿ ರೈಲುಗಳ ನಿಲುಗಡೆ ರದ್ದು :
ಸಿಕಂದರಾಬಾದ್ ವಿಭಾಗದ ಬಲ್ಹರ್ಷಾ-ಕಾಜಿಪೇಟೆ ವಿಭಾಗದಲ್ಲಿ ರೆಚ್ನಿ ರೋಡ್ ಮತ್ತು ಬೆಲ್ಲಂಪಲ್ಲಿ ನಿಲ್ದಾಣಗಳ ನಡುವಿನ ಹೊಸ ಮೂರನೇ ಮಾರ್ಗದ ಕಾರ್ಯಾರಂಭಕ್ಕೆ ಸಂಬAಧಿಸಿದAತೆ, ಬೆಲ್ಲಂಪಲ್ಲಿ ಯಾರ್ಡ್ನಲ್ಲಿ ಎಂಜಿನಿಯರಿAಗ್ ಕೆಲಸಗಳ ಕಾರಣದಿಂದಾಗಿ ಎರಡು ರೈಲುಗಳಿಗೆ ಬೆಲ್ಲಂಪಲ್ಲಿಯಲ್ಲಿ ನಿಲುಗಡೆ ರದ್ದುಪಡಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.
ಜೂನ್ ೨೧ ರಂದು ಹುಬ್ಬಳ್ಳಿಯಿಂದ ಪ್ರಾರಂಭವಾಗುವ (ರೈಲು ಸಂಖ್ಯೆ ೦೭೩೨೩ )ಎಸ್‌ಎಸ್‌ಎಸ್ ಹುಬ್ಬಳ್ಳಿ – ಬನಾರಸ್ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲು ಬೆಲ್ಲಂಪಲ್ಲಿಯಲ್ಲಿ ನಿಲ್ಲುವುದಿಲ್ಲ. ಪರ್ಯಾಯವಾಗಿ, ಈ ರೈಲು ಸಿರ್‌ಪುರ್ ಕಾಗಜ್‌ನಗರದಲ್ಲಿ ನಿಲುಗಡೆಯನ್ನು ಒದಗಿಸಲಿದೆ.
ಜೂನ್ ೨೧ ರಂದು ಮೈಸೂರಿನಿಂದ ಪ್ರಾರಂಭವಾಗುವ ಮೈಸೂರು – ಜೈಪುರ (ರೈಲು ಸಂಖ್ಯೆ ೧೨೯೭೫ ) ದ್ವಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಬೆಲ್ಲಂಪಲ್ಲಿಯಲ್ಲಿ ನಿಗದಿತ ನಿಲುಗಡೆಯನ್ನು ಸಹ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.