ಬೆಂಗಳೂರು: ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿ ದ್ವೀತಿಯ ಸ್ಥಾನ ಬೆಳ್ಳಿ ಪದಕ ಪಡೆದು ನಮ್ಮ ಕೆಂಭಾವಿಯ ಹೆಸರು ರಾಷ್ಟ್ರ ಮಟ್ಟದಲ್ಲಿ ಇಂದಿರಾ ವಾದಿರಾಜ ಕುಲಕರ್ಣಿ ಕೆಂಭಾವಿ ಬೆಳಗಿಸಿದ್ದಾರೆ.
ಏನಿದು ಮಾಧ್ವ ಐಡಲ್: ಮುಂಬೈ ಶ್ರೀ ಸತ್ಯಧ್ಯಾನ ವಿದ್ಯಾಪೀಠ ದಿಂದ ಹಮ್ಮಿಕೊಳ್ಳಲಾದ ಈ ಗಾನ ಸ್ಪರ್ಧೆ ಇದು ದಾಸರ ಹಾಡುಗಳ ಸ್ಪರ್ಧಾತ್ಮಕ ಸ್ಪರ್ಧೆ ಇದರಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಅನೇಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಇದರಲ್ಲಿ ನಮ್ಮ ಕೆಂಭಾವಿಯ ಇಂದಿರಾ ಕುಲಕರ್ಣಿ ಕೂಡಾ ಒಬ್ಬರು. ಒಟ್ಟು 5 ರೌಂಡ ಮೂಲಕ ಮುಂಬೈನಲ್ಲಿ ಈ ಸ್ಪರ್ಧೆ ನಡೆಯಿತು ಇದರಲ್ಲಿ 5 ರೌಂಡ್‌ನಲ್ಲಿ ಉತ್ತಮ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿ ಮುಂಬೈನ ಪ್ರಸಿದ್ಧ ಕಾಳಿದಾಸ ಆಡಿಟೋರಿಯಂ ನಲ್ಲಿ ಹಲವಾರು ಭಾರತದ ಖ್ಯಾತ ದಾಸ ಸಾಹಿತ್ಯದ ಮೇರು ಕಲಾವಿದರು ಹಾಗೂ ನಿರ್ಣಾಯಕರ ಮುಂದೆ ಹಾಡಿ ದ್ವೀತೀಯ ಸ್ಥಾನ ಪಡೆದು ಶ್ರೀ ಶ್ರೀ ಸತ್ಯಾತ್ಮ ತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಬೆಳ್ಳಿ ಪದಕ ಹಾಗೂ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ಪಡೆದರು.