ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸೃಷ್ಟಿ ಪಾಟೀಲ ರಾಜೀನಾಮೆ

0
25

ಹಾವೇರಿ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸೃಷ್ಟಿ ಪಾಟೀಲ ರಾಜೀನಾಮೆ ನೀಡಿದ್ದಾರೆ.
ಒಂದು ವರ್ಷದ ಹಿಂದೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಒಬ್ಬ ಗೃಹಿಣೆಯಾಗಿ ಸಾಧ್ಯವಾದಷ್ಟು ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಆದರೆ ನಿರೀಕ್ಷಿಸಿದಷ್ಟು ಕೆಲಸ ನನ್ನಿಂದ ಆಗಿಲ್ಲವೆಂಬ ಭಾವನೆ ಕಾಡುತ್ತಿದೆ. ಆದ್ದರಿಂದ ಆ ಸ್ಥಾನಕ್ಕೆ ಅನ್ಯಾಯವಾಗಬಾರದೆಂಬ ಕಾರಣಕ್ಕೆ ನನ್ನ ಸ್ವ-ಇಚ್ಛೆಯಿಂದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸೃಷ್ಟಿ ಪಾಟೀಲ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

Previous articleಅಧಿಕಾರ ದುರುಪಯೋಗ: ಕಾಂಗ್ರೆಸ್‌ನಿಂದ ದಳದ ಆಸ್ತಿ ಕಬ್ಜಾ
Next articleಇವಿಎಂ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದೆ