ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಎಚ್.ಕೆ. ಪಾಟೀಲ ಭೇಟಿ

0
26

ಗದಗ(ಮುಳಗುಂದ): ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹನಿಗೊಳಗಾದ ಗದಗ ಮತಕ್ಷೇತ್ರದ ಹಲವು ಪ್ರದೇಶಗಳಿಗೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಪ್ರಮುಖವಾಗಿ ಮುಳಗುಂದ ಕುರ್ತಕೋಟಿ ಮಾರ್ಗಮಧ್ಯದ ಹಳ್ಳದಲ್ಲಿ ಭಾರಿ ಮಳೆಯಿಂದಾಗಿ ಕೋಚ್ಚಿ ಹೋದ ರಸ್ತೆ ಹಾಗೂ ಕುರ್ತಕೋಟಿ ನೀಲಗುಂದ ರಸ್ತೆ ವೀಕ್ಷಿಸಿದರು. ಅಂತೂರ ಬೆಂತೂರ ಗ್ರಾಮದ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಕಂದಾಯ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬಾರಿ ಮಳೆ ಹಾಗೂ ನೀರಿನಿಂದ ಹಾನಿಯಾದ ಮುಳಗುಂದ ಸೇರಿದಂತೆ ಸುತ್ತಲ ಗ್ರಾಮಗಳ ವರದಿ ಪಡೆದು ಪರಿಹಾರಕ್ಕಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸುವ ಭರವಸೆಯನ್ನು ಜನರಿಗೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಅಪ್ಪಣ್ಣ ಇನಾಮತಿ, ಅಶೋಕ ಮಂದಾಲಿ ಇತರರಿದ್ದರು.

Previous articleಯಡಿಯೂರಪ್ಪ ಅವರಿಗೆ ಜಾಮೀನು, ನ್ಯಾಯ ಸಮ್ಮತ
Next articleಶಾಲಾ ಬಸ್‌ಗೆ ಟಿಪ್ಪರ್ ಡಿಕ್ಕಿ: ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ