ಮಲ್ಲಮ್ಮನ ಆದರ್ಶ ನಮ್ಮೆಲ್ಲರಿಗೂ ಮಾದರಿ

0
25

ಮುಧೋಳ(ಗ್ರಾ) : ಮಹಾಸಾಧ್ವಿ ಹೇಮರಡ್ಡಿ‌ ಮಲ್ಲಮ್ಮನ ಆದರ್ಶವನ್ನು ಅಳವಡಿಸಿಕೊಂಡು ನಾವೆಲ್ಲರೂ ಜೀವನದಲ್ಲಿ ಯಶಸ್ಸು ಸಾಧಿಸೋಣ ಎಂದು ಕಾನೂನು ಮತ್ತು ಸಂಸದೀಯ ಮಂಡಳಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಮೆಟಗುಡ್ಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ಮೇಮ ಸಭಾಭವನ ಉದ್ಘಾಟನೆ ಸಮಾರಂಭದಲ್ಲಿ ಮಾತ‌ಅಡಿದ ಅವರು, ಮೆಟಗುಡ್ಡ ಗ್ರಾಮದಲ್ಲಿ ಸಮಾಜದ ರಚನಾಕಾತ್ಮಕ‌‌ ಕಾರ್ಯದಲ್ಲಿ‌ ಸಕ್ರೀಯವಾಗಿ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಹಿಂದಿನ ದಿನಮಾನದಲ್ಲಿ‌ ಹೇಮರಡ್ಡಿ ಮಲ್ಲಮ್ಮನನ್ನು ಕೇವಲ ಜ.19ರಂದು ಮಾತ್ರ ನೆನಪಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಎರೆಹೊಸಳ್ಳಿ‌ ಶ್ರೀಗಳ ಪರಿಶ್ರಮದಿಂದ ಪ್ರತಿಯೊಂದು ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯಕ್ಕೆ‌‌ ಮುಂದಾಗಿರುವುದರಿಂದ ಮನೆ ಮನೆಗೂ ಹೇಮರಡ್ಡಿ‌‌ ಮಲ್ಲಮ್ಮನ‌ ಮಹಿಮೆ ತಲುಪುವಂತಾಗಿದೆ ಎಂದರು.
ಮಹಾಯೋಗಿ ವೇಮನರು ಜಗತ್ತು‌‌‌ ಕಂಡ ಮಹಾನ್ ಯೋಗಿಯಾಗಿದ್ದಾರೆ. ಅವರ ಸಾಹಿತ್ಯ, ಸಂದೇಶ, ಮಾರ್ಗದರ್ಶನದಲ್ಲಿ ನಾವೆಲ್ಲರೂ‌ ಮಡೆಯುತ್ತ ಸಮುದಾಯದ ಜೊತೆಗೆ ಇತರರಿಗೂ‌‌ ಮಾದರಿಯಾಗಿ‌ ಜೀವಿಸೋಣ ಎಂದರು.
ಹೇಮರಡ್ಡಿ‌‌ ಮಲ್ಲಮ್ಮನ ಪ್ರೇರಣೆಯಿಂದ ಮಹಾಯೋಗಿ ವೇವನ ನಿರೂಪಿತರಾದರು ಎಂದು ತಿಳಿಸಿದರು.
ನಮ್ಮತನವನ್ನು ನೆನಪಿಸುವ ವೃತ್ತಿಯನ್ನು ಮರೆಯದೆ ನಮ್ಮ ಸಮಾಜ ಬೇರ-ಬೇರೆ ರಂಗದಲ್ಲಿಯೂ ವಿಶೇಷ ಸಾಧನೆ ಮಾಡಿದೆ ಎಂದರು.
ಅನ್ಯಾಯ ಕಂಡಲ್ಲಿ ಪ್ರತಿಭಟನೆಗೆ ನಮ್ಮ ಸಮುದಾಯ ಕೂಡಲೇ ಮುಂದಾಗುತ್ತದೆ. ವೇಮನರ ಚಿಂತನೆಯೊಂದಿಗೆ ನಾವೆಲ್ಲರೂ ಜೀವನದಲ್ಲಿ ಬದುಕಿ ಸುಂದರ ಜೀವನ ನಿರೂಪಿಸಿಕೊಳ್ಳೋಣ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್.ಪಾಟೀಲ, ವಿಪ ಸದಸ್ಯ ಪಿ.ಎಚ್.ಪೂಜಾರ ಇತರರು ಇದ್ದರು.

Previous articleಸ್ಥಳೀಯ ಜನರಿಗೆ ಉದ್ಯೋಗ ಅವಕಾಶಕ್ಕೆ ಆಗ್ರಹ
Next articleದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ