ಮನೆ ಮುಂದೆ ನಿಲ್ಲಿಸಿದ್ದ ಗಾಡಿಗೆ ಬೆಂಕಿ ಹಚ್ಚಿದ ಪುಂಡರು

0
12

ಕುಷ್ಟಗಿ: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿ ಆದ ಘಟನೆ ಪಟ್ಟಣದ 7ನೇ ವಾರ್ಡಿನಲ್ಲಿ ಬುಧವಾರ ರಾತ್ರಿ ಜರುಗಿದೆ.
7ನೇ ವಾರ್ಡ್‌ನ ಮಹಮ್ಮದ್ ನವಾಜ್ ಅರೆಕಾರಿ ಇವರಿಗೆ ಸೇರಿದ ಸ್ಕೂಟರ್‌ಗೆ ಅಪರಿಚಿತರು ಬೈಕ್ ಮೂಲಕ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಲೋಕಸಭೆ ಚುನಾವಣೆಯಲ್ಲಿ ಪ್ರಿಯಂಕಾ ಸ್ಪರ್ಧಿಸಲ್ಲ
Next articleಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ