ಬೆಳಗಾವಿ: ಮಹಿಳೆಯೊಬ್ಬಳು ಪರ ಪುರುಷನೊಂದಿಗೆ ಮನೆ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮಾರಿಹಾಳ ಗ್ರಾಮದಲ್ಲಿ ನಡೆದಿದೆ.
ಮಾಸಾಬಿ(೨೮) ಪರಾರಿಯಾದ ಮಹಿಳೆ. ಈ ಮಹಿಳೆ ಚಿನ್ನ, ಹಣ, ಸೈಟ್ ದಾಖಲೆ, ಕಾರು ಸಮೇತ ಪರ ಪುರುಷನೊಂದಿಗೆ ಪರಾರಿಯಾಗಿದ್ದು ಇದರಿಂದ ಮಹಿಳೆಯ ಪತಿ ಕಂಗಾಲಾಗಿದ್ದಾನೆ. ಪರಾರಿಯಾದ ಮಾಸಾಬಿ ಇದೇ ಗ್ರಾಮದ ಬಸವರಾಜ ಸೀತಿಮನಿ ಎಂಬಾತನ ಜೊತೆಗೆ ಪರಾರಿಯಾಗಿದ್ದಾಳೆ. ಮಾಸಾಬಿ ಮನೆಯಲ್ಲಿದ್ದ ೬೦ ಗ್ರಾಂ ಚಿನ್ನ, ಮನೆಯಲ್ಲಿದ್ದ ಐದು ಲಕ್ಷ ಹಣ, ಸೈಟ್ ದಾಖಲೆ, ಕಾರು, ಮನೆಯ ಸಿಲಿಂಡರ್ ಸೇರಿ ಎಲ್ಲಾ ವಸ್ತುಗಳ ಸಮೇತ ಓಡಿ ಹೋಗಿದ್ದಾಳೆ ಎನ್ನಲಾಗಿದೆ.
ಮಾಸಾಬಿ ಪತಿ ಆಸಿಫ್ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ನಿವಾಸಿಯಾಗಿದ್ದರು. ಪತ್ನಿಗಾಗಿ ಅಪ್ಪ, ಅಮ್ಮನನ್ನು ದೂರ ಮಾಡಿ ಆಕೆಯ ಗ್ರಾಮವಾದ ಮಾರಿಹಾಳದಲ್ಲಿ ಬಂದು ನೆಲೆಸಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಸೀಫ್ ತನ್ನ ಪತ್ನಿಯ ಹೆಸರಲ್ಲಿ ಬಾಳೆಕುಂದ್ರಿ ಹಾಗೂ ನಂದಗಡದಲ್ಲಿ ಎರಡು ಸೈಟ್ ಮಾಡಿದ್ದರು.
ಜನವರಿ ೧ರಂದು ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಮಾಸಾಬಿ, ಪತಿಯ ಮನೆಗೆ ಹೋಗುವುದಾಗಿ ಹೇಳಿ ಪರ ಪುರುಷನೊಂದಿಗೆ ಪರಾರಿಯಾಗಿದ್ದಾಳೆ. ಇನ್ನು ಈ ಬಸವರಾಜ ಸೀತಿಮನಿಗೆ ಈ ಮೊದಲು ಮದುವೆಯಾಗಿ ಮಕ್ಕಳು ಇವೆ. ಈತನ ಜೊತೆ ಆಸೀಫ್ ಪತ್ನಿ ಕಾರಿನಲ್ಲಿ ಪರಾರಿಯಾಗಿದ್ದಾಳೆ. ಇದರಿಂದ ಕಂಗಾಲಾಗಿರುವ ಆಸೀಫ್, ಪತ್ನಿ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ಪೊಲೀಸ್ ಮೊರೆ ಹೋಗಿದ್ದಾರೆ. ಜನವರಿ ೨ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.