ಮನೆ ದರೋಡೆಕೋರರನ್ನು ತಳಿಸಿದ ಗ್ರಾಮಸ್ಥರು

0
40

ಹಾವೇರಿ: ಹಾಡು ಹಗಲೇ ಮನೆ ದರೋಡೆಗೆ ಇಳಿದಿದ್ದ ಖದೀಮರನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಬಸವರಾಜ ಹೊಸೂರು ಎಂಬುವರು ಮನೆಗೆ ಬೀಗ ಹಾಕಿಕೊಂಡು ಹೊಲಕ್ಕೆ ಹೋದಾಗ ಮನೆಗೆ ನುಗ್ಗಿದ್ದ ಇಬ್ಬರು ಕಳ್ಳರು ಟ್ರಿಜೂರಿ ಮುರಿದು ಕಳ್ಳತನ ಮಾಡಲು ಮುಂದಾಗಿದ್ದರು. ಅಷ್ಟೊತ್ತಿಗೆ ಮನೆಯ ಮಾಲೀಕ ಬಸವರಾಜ ಮನೆಗೆ ಬಂದಿದ್ದಾರೆ. ಆಗ ಕಳ್ಳರು ಮನೆಯ ಮಾಲೀಕನಿಗೆ ಚಾಕು ತೋರಿಸಿ ಹೆದರಿಸಿದ್ದಾರೆ. ತಕ್ಷಣ ಮಾಲೀಕ ಬಸವರಾಜ ಚೀರಿದಾಗ ಸುತ್ತಮುತ್ತಲಿನ ಮನೆಯವರು ಧಾಮಿಸಿ ಕಳ್ಳರನ್ನು ಹಿಡಿದು ಥಳಿಸಿ ಬಾಯಿ ಬಿಡಿಸಿದಾಗ ಒಬ್ಬ ಹುಬ್ಬಳ್ಳಿ, ಮತ್ತೊಬ್ಬ ಲಕ್ಷ್ಮೇಶ್ವರದವರು ಎಂದು ತಿಳಿದು ಬಂದಿದ್ದು, ಇಬ್ಬರನ್ನೂ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

Previous articleಬೆಳಗಾವಿ ಮೃಗಾಲಯದಲ್ಲಿ ಸಿಂಹಿಣಿ ಸಾವು
Next articleಮುಡಾ ಕೇಸ್, ಪೋಕ್ಸೊ ಕೇಸ್, ಹೈಕೋರ್ಟ್ ಅಂತಿಮ ಆದೇಶ ಇಂದು ಸಿದ್ದರಾಮಯ್ಯ, ಬಿಎಸ್‌ವೈಗೆ ಇಂದು ಬಿಗ್ ಡೇ