ಮಂತ್ರಾಲಯದಲ್ಲಿ ಶ್ರೀಗುರುರಾಯರ ವರ್ಧಂತಿ ಉತ್ಸವ

ರಾಯಚೂರು: ಮತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ವೈಭವೋತ್ಸವ ಹಿನ್ನೆಲೆಯಲ್ಲಿ ಗುರುವಾರ
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವರ್ಧಂತಿ ಉತ್ಸವ(ಜನ್ಮದಿನೋತ್ಸವ) 429ನೇ ವರ್ಷದ ಉತ್ಸವ ಪೂರ್ಣಗೊಂಡು 430ನೇ ಜನ್ಮದಿನೋತ್ಸವ ನಡೆಯಿತು.
ಶ್ರೀರಾಯರ ವರ್ಧಂತಿ ಉತ್ಸವದ ಅಂಗವಾಗಿ ರಾಯರ ಮೂಲಬೃಂದಾವನಕ್ಕೆ ವಿಶೇಷ ಪಂಚಾಮೃತಾಭಿಷೇಕನೆರವೇರಿಸಲಾಯಿತು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅದ್ಧೂರಿಯಾಗಿ ರಥೋತ್ಸವ ನಡೆಯಿತು. ಚೆನ್ನೈ ನಾದಹಾರ ಟ್ರಸ್ಟ್ ನ ಕಲಾವಿದರಿಂದ ನಾದಹಾರ ಕೀರ್ತನೆಗಳ ಸಂಗೀತ ಕಾರ್ಯಕ್ರಮ ನಡೆಯಿತು.