ಮಂಗಳಸೂತ್ರ ಪ್ರಕರಣ: ರೈಲ್ವೆ ಇಲಾಖೆಯ ಮುಂದಿನ ಎಲ್ಲಾ ಪರೀಕ್ಷಾ ನಿಯಮದಲ್ಲೂ ಪರಿಷ್ಕರಣೆ

0
22

ಮಂಗಳೂರು: ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆ ಪರೀಕ್ಷೆಗೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಜನಿವಾರದಂತಹ ಧಾರ್ಮಿಕ ಗುರುತುಗಳನ್ನು ಧರಿಸಬಾರದು ಎನ್ನುವ ಸೂಚನೆಯನ್ನು ಕೈ ಬಿಡಬೇಕೆಂಬ ಕೋರಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿ ರೈಲ್ವೆ ಇಲಾಖೆಯ ಎಲ್ಲಾ ಪರೀಕ್ಷೆಗಳ ನಿಯಮದಲ್ಲೂ ಪರಿಷ್ಕರಣೆ ತಂದಿರುವ ಕೇಂದ್ರ ಸರ್ಕಾರದ ಕ್ರಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಾಗತಾರ್ಹ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ, ಇದಕ್ಕೆ ತಕ್ಷಣ ಸಕಾರಾತ್ಮಕವಾಗಿ ತುರ್ತು ಸ್ಪಂದಿಸಿ, ಪ್ಯಾರಾಗ್ರಾಫ್ 7 ಅನ್ನು ಇಲಾಖೆಯ ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುವಂತೆ ಮಾರ್ಪಡಿಸಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

Previous articleಸಿಎಂ ಗೂಂಡಾಗಿರಿ ವರ್ತನೆಯಿಂದ ರಾಜ್ಯದ ಘನತೆಗೆ ಧಕ್ಕೆ
Next articleಪಾಕ್‌ಗೆ ನೀರು ನಿಲ್ಲಿಸೋದು ಸಾಧ್ಯವಾ?