Home ತಾಜಾ ಸುದ್ದಿ ಭ್ರಷ್ಟಾಚಾರದ ಸುಳಿಯಿಂದ ಹೊರಬಂದು ದಾಖಲೆ ಲಾಭದೆಡೆಗೆ KSDL

ಭ್ರಷ್ಟಾಚಾರದ ಸುಳಿಯಿಂದ ಹೊರಬಂದು ದಾಖಲೆ ಲಾಭದೆಡೆಗೆ KSDL

0

ಬೆಂಗಳೂರು: ಈ ಹಿಂದಿನ ಸರ್ಕಾರದ ವೇಳೆ ಭ್ರಷ್ಟಾಚಾರದ ಸುಳಿಗೆ ಸಿಲುಕಿದ್ದ KSDL ಸಂಸ್ಥೆಯು  #ನಮ್ಮಸರಕಾರ ಸುಧಾರಣಾ ಕ್ರಮಗಳ ಪರಿಣಾಮ ಇದೀಗ ದಾಖಲೆ ಲಾಭಕ್ಕೆ ಮರಳಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು KSDL ಸಂಸ್ಥೆಯ ಆಡಳಿತ ಸುಧಾರಣೆ, ನೂತನ ಉತ್ಪನ್ನಗಳು, ಗುಣಮಟ್ಟ, ಮಾರುಕಟ್ಟೆಯ ತಂತ್ರಗಳನ್ನು ಅಳವಡಿಸಿಕೊಂಡ ಪರಿಣಾಮ ವರ್ಷದಿಂದ ವರ್ಷಕ್ಕೆ ಸಂಸ್ಥೆ ಹೆಚ್ಚಿನ ಲಾಭ  ಗಳಿಸುತ್ತಿದ್ದು ರಾಜ್ಯದ ಬೊಕ್ಕಸ ಶ್ರೀಮಂತಗೊಳಿಸುತ್ತಿದೆ.

ಕಳೆದ ವರ್ಷ 1375 ಕೋಟಿ ರೂಪಾಯಿ ವಹಿವಾಟು ನಡೆಸಿದ್ದ ಸಂಸ್ಥೆ ಪ್ರಸಕ್ತ ವರ್ಷ ಈಗಾಗಲೇ 1500 ಕೋಟಿ ಮೀರಿ ವಹಿವಾಟು ನಡೆಸಿದೆ. ಇದಲ್ಲದೆ ಸಂಸ್ಥೆಯ ಉತ್ಪಾದನೆ ಮತ್ತು ಮಾರುಕಟ್ಟೆ ಸಾಮರ್ಥ್ಯ ವಿಸ್ತರಿಸಿಕೊಳ್ಳಲು ವಿನೂತನ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಪ್ರೋತ್ಸಾಹಿಸಿ, ಲಾಭದತ್ತ ಮುನ್ನಡೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯತಂತ್ರ ರೂಪಿಸಿದೆ ಎಂದಿದ್ದಾರೆ.

Exit mobile version