Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು:‌ ಬಿಗ್​ಬಾಸ್​ ಖ್ಯಾತಿಯ ಲಾಯರ್​ ಜಗದೀಶ್​ ಅರೆಸ್ಟ್​!

ಬೆಂಗಳೂರು:‌ ಬಿಗ್​ಬಾಸ್​ ಖ್ಯಾತಿಯ ಲಾಯರ್​ ಜಗದೀಶ್​ ಅರೆಸ್ಟ್​!

0

ಬೆಂಗಳೂರು: ಬಿಗ್​ಬಾಸ್​ ಸೀಸನ್ 11ರ ಮಾಜಿ ಸ್ಪರ್ಧಿ ವಕೀಲ ಕೆ.ಎನ್‌.​ ಜಗದೀಶ್ ಕುಮಾರ್‌ ಅವರನ್ನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ‌ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಜಗದೀಶ್​ರನ್ನು ಬಂಧಿಸಲಾಗಿದೆ.

ಮಂಜುನಾಥ ಎನ್ನುವವರು ಜಗದೀಶ ವಿರುದ್ಧ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಈ ಕುರಿತಂತೆ ಬೆಂಗಳೂರು ಪೊಲೀಸರು ಆಗಸ್ಟ್ 21ರಂದು ನೋಟಿಸ್ ನೀಡಲು ಜಗದೀಶ್ ಮನೆಗೆ ತೆರಳಿ ಬರಿಗೈಯಲ್ಲಿ ಹಿಂತಿರುಗಿದ್ದರು.

ಬಿ‌ಎನ್ಎಸ್ ಸೆಕ್ಷನ್ 196, 299 ಅಡಿಯಲ್ಲಿ ದೂರು ದಾಖಲಾಗಿತ್ತು. ಮನೆ ಬಾಗಿಲು ತೆರೆಯದೇ ನೊಟೀಸ್ ಪಡೆದುಕೊಳ್ಳಲು ನಿರಾಕರಿಸಿದ್ದ ಜಗದೀಶ್‌ ಅವರನ್ನು ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version