ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡದ ಪ್ರಸಿದ್ಧ ಹಿರಿಯ ನಟ, ಪದ್ಮಭೂಷಣ ಡಾ. ಅನಂತ್ ನಾಗ್ ಅವರೊಂದಿಗೆ ʻಒಂದು ಕಲಾತ್ಮಕ ಸಂಜೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸನ್ಮಾನಿಸಿದರು.
75ರ ವಯಸ್ಸಿನಲ್ಲೂ ಅನಂತ ನಾಗ್ ರವರು ಚಿತ್ರರಂಗದಲ್ಲಿ ತುಂಬಾ ಉತ್ಸಾಹದಿಂದ, ಕ್ರಿಯಾಶೀಲರಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಂತ ನಾಗ್ ನಟನೆಯ ಚಲನಚಿತ್ರಗಳು, ಎಂತಹದ್ದೇ ಪಾತ್ರಗಳನ್ನು ಕೊಟ್ಟರು ನಿಭಾಯಿಸಿ, ಅತ್ಯುತ್ತಮ ನಟನೆಯ ಮೂಲಕ ನಮ್ಮನ್ನು ರಂಜಿಸಿದ್ದಾರೆ ಎಂದು ಜೋಶಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದರಾದ ಗಾಯತ್ರಿ ಅವರು ಹಾಗೂ ಗಣಪತಿ ಭಟ್ ಸೇರಿದಂತೆ ಚಿತ್ರರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.