Home ತಾಜಾ ಸುದ್ದಿ ಭೀಕರ ಅಪಘಾತ:  ಬಾಲಕಿ ಸಜೀವ ದಹನ

ಭೀಕರ ಅಪಘಾತ:  ಬಾಲಕಿ ಸಜೀವ ದಹನ

0

ಬೆಂಗಳೂರು:   ಕಾರು ಅಪಘಾತದಲ್ಲಿ 15 ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾದ ಘಟನೆ ನಡೆದಿದೆ.
ಮಾದಾವರ ಟೋಲ್ ಬಳಿ ಈ ದಾರುಣ ಘಟನೆ ನಡೆದಿದೆ. ಬೊಲೆರೋ ಕಾರ್ ಮತ್ತು ಓಮ್ನಿ ಕಾರುಗಳ ನಡುವೆ ಅಪಘಾತವಾಗಿ,  ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಡು ರಸ್ತೆಯಲ್ಲಿ ಕಾರು ಹೊತ್ತಿ ಉರಿದಿದ್ದು. ಓಮ್ನಿ ಕಾರಿನಲ್ಲಿ ಒಂದೇ ಕುಟುಂಬದ 8 ಮಂದಿ ಪ್ರಯಾಣ ಮಾಡುತ್ತಿದ್ದರು. ಇವರು ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಅಬ್ಬಿಗೆರೆಯಿಂದ ದಾಸನಪುರಕ್ಕೆ ವಾಪಾಸ್ ಆಗುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ 15 ವರ್ಷದ ಬಾಲಕಿ ದಿವ್ಯಾ ಸಜೀವ ದಹನವಾಗಿದ್ದಾಳೆ. ಓರ್ವ ಬಾಲಕಿ ಸಾವನ್ನಪ್ಪಿದರೆ, ಇನ್ನುಳಿದ ಆರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version