ಬ್ರಾಹ್ಮಣರ ಸುಪ್ತ ಶಕ್ತಿ ಅನಾವರಣ: ಹಾರನಹಳ್ಳಿ ಅಭಿಮತ

0
41

ದಾವಣಗೆರೆ: ಬ್ರಾಹ್ಮಣ ಸಮಾಜದಲ್ಲಿನ ಸುಪ್ತ ಶಕ್ತಿ, ಸಾಮರ್ಥ್ಯ ರಾಜ್ಯಮಟ್ಟದ ಸಮಾವೇಶದ ಬಳಿಕ ಅನಾವರಣಗೊಂಡಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ನಗರದ ಶಂಕರ್ ಸಮುದಾಯ ಭವನದಲ್ಲಿ ಭಾನುವಾರ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿ ಸ್ಫೂರ್ತಿ-ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಮಹಾಸಭಾದ ಅಧ್ಯಕ್ಷನಾದ ಬಳಿಕ ಅವರು ವಕೀಲ ವೃತ್ತಿಯವರು. ನಮಗೆ ಅಧ್ಯಕ್ಷರು ಸಿಗುತ್ತಾರೋ ಇಲ್ಲವೋ ಎಂದು ಜನರು ಮಾತನಾಡುತ್ತಿದ್ದರು. ಆದರೆ, ಮೊದಲ ರಾಜ್ಯ ಸಮ್ಮೇಳನದ ಬಳಿಕ ನನ್ನ ಬಗ್ಗೆ ಇರುವ ಅಭಿಪ್ರಾಯ ಬದಲಾಯಿತು ಎಂದರು.
ಸಮ್ಮೇಳನ ಬಳಿಕ ನಮ್ಮ ಸಮಾಜದ ದೊಡ್ಡ ಕೈಗಾರಿಕೋದ್ಯಮಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಬ್ರಾಹ್ಮಣ ಬಂಧುಗಳು, ಐಎಎಸ್, ಐಪಿಎಸ್ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಸಮಾಜದ ಬಂಧುಗಳು ನಾವು ಸಮಾಜಕ್ಕಾಗಿ ಏನು ಮಾಡಬೇಕು ಹೇಳಿ? ಎಂದು ಕೇಳಿ ಕೊಳ್ಳುತ್ತಿದ್ದಾರೆ. ಇದು ನಮಗೆ ಇರುವ ಸುಪ್ತ ಶಕ್ತಿ, ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಮಾಜವನ್ನು ಎಲ್ಲರೂ ಗೌರವಿಸುತ್ತಾರೆ. ಆದರೆ, ನಮ್ಮಲ್ಲೇ ಇರುವ ಸಣ್ಣಪುಟ್ಟ ಗುಂಪುಗಾರಿಕೆ ನಮಗೆ ಸಣ್ಣ ಹಿನ್ನಡೆ ತಂದಿದೆ. ಸಮಾವೇಶ ಮಾಡಲು ಇಚ್ಛಿಸಿದಾಗ ಎಲ್ಲಾ ಪಕ್ಷದವರು ಧನ ಸಹಾಯ ಮಾಡಿದರು. ಬಂದ ಹಣದಲ್ಲಿ ನಾನು ಸಮಾಜಕ್ಕೆ ಸಾಕಷ್ಟು ಉಳಿತಾಯ ಮಾಡಿದ್ದೇನೆ ಎಂದರು.
ನಾನು ರಾಜ್ಯಾಧ್ಯಕ್ಷನಾದ ಬಳಿಕ ಹಲವೆಡೆ ಸುತ್ತಿದ್ದೇನೆ. ಆದರೆ, ದಾವಣಗೆರೆ ಜಿಲ್ಲಾ ಸಮಾಜದಷ್ಟು ಸಕ್ರಿಯ ಸಂಘ ಮತ್ತೊಂದಿಲ್ಲ. ನಿಜಕ್ಕೂ ನೀವು ಮಾದರಿ ಆಗಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವೈದ್ಯ, ಸಮಾಜದ ಮಾಜಿ ಅಧ್ಯಕ್ಷ ಡಾ. ಅಚ್ಯುತ್ ಮಾತನಾಡಿ, ನಾನು ಮೊದಲ ಬಾರಿಗೆ ವಿವಿಧ ವೃತ್ತಿನಿರ ತರ ವಿವರವುಳ್ಳ ಪುಸ್ತಿಕೆ ಮಾಡಲು ವಿವರ ಕೇಳಿದಾಗ ಹಲವರು ಮರು ಪ್ರಶ್ನೆ ಹಾಕಿದ್ದರು. ಮೊಬೈಲ್ ಇಲ್ಲದ ಕಾಲದಲ್ಲಿ ಮಾಡಿದ ಕೈಪಿಡಿ ಸಾಕಷ್ಟು ಉಪಯೋಗಕ್ಕೆ ಬಂತು. ಈಗ ನಮ್ಮ ಸಮಾಜ ಬಾಂಧವರು ಯಾವ್ಯಾವ ವೃತ್ತಿಯಲ್ಲಿ ಇದ್ದಾರೆ. ಯಾವ ಉತ್ಪನ್ನ ಮಾರಾಟ ಮಾಡುತ್ತಾರೆ, ತಯಾರಿಸುತ್ತಾರೆ ಎಂಬ ಸಂಪೂರ್ಣ ವಿವರ ಲಭ್ಯ ಆಗುವಂತೆ ಆಗಿದೆ. ಇದನ್ನು ನೀವು ಸದುಪಯೋಗ ಪಡೆದುಕೊಳ್ಳಿ. ನಮಗೆ ಯಾವುದೇ ಸೇವೆ ಬೇಕಾದರೂ ನಮ್ಮಲ್ಲಿಯೇ ಇರುವ ವೃತ್ತಿಪರರನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ಸಮಾಜದ ಅಧ್ಯಕ್ಷ ಶಶಿಕಾಂತ ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ್, ಬ್ರಾಹ್ಮಣ ಸಮಾಜ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಸ್.ಪಿ. ಸತ್ಯನಾರಾಯಣರಾವ್, ಮುಖಂ ಡರಾದ ಎಲ್. ರಾಮಚಂದ್ರರಾವ್, ಎಸ್. ಗೋಪಾಲದಾಸ್ ಮತ್ತಿತರರು ಹಾಜರಿದ್ದರು. ಇದೇ ವೇಳೆ ರಾಜ್ಯಮಟ್ಟದ ಭಗವದ್ಗೀತೆ ಮತ್ತು ಜಾನಪದ ನೃತ್ಯದಲ್ಲಿ ವಿಜೇತರಾದವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. 

Previous articleಜಾರಕಿಹೊಳಿ ಮುಂದಿನ ಸಿಎಂ: ಮೊಳಗಿದ ಘೋಷಣೆ
Next articleಮೈಕ್ರೋ ಕ್ರೌರ್ಯ ಬೀದಿಗೆ ಬಂದ ಕುಟುಂಬ