Home ತಾಜಾ ಸುದ್ದಿ ಬೇರೆ ದೇಶದಲ್ಲಾಗಿದ್ದರೆ ಭಾಗ್ವತ್ ಜೈಲಿನಲ್ಲಿರುತ್ತಿದ್ದರು

ಬೇರೆ ದೇಶದಲ್ಲಾಗಿದ್ದರೆ ಭಾಗ್ವತ್ ಜೈಲಿನಲ್ಲಿರುತ್ತಿದ್ದರು

0

ನವದೆಹಲಿ: ಭಾರತಕ್ಕೆ ನಿಜವಾದ ಸ್ವಾತಂತ್ರ‍್ಯ' ೧೯೪೭ ರಲ್ಲಿ ಸಿಕ್ಕಿಲ್ಲ, ರಾಮ ಮಂದಿರ ಪ್ರತಿಷ್ಠಾಪನಾ ದಿನದಂದು ಸಿಕ್ಕಿತು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇಂಥ ಹೇಳಿಕೆ ಬೇರೆ ದೇಶದಲ್ಲಿ ನೀಡಿದ್ದರೆ ಅವರು ಜೈಲಿನಲ್ಲಿರುತ್ತಿದ್ದರು ಎಂದಿದ್ದಾರೆ. ಕಾಂಗ್ರೆಸ್‌ನ ನೂತನ ಪ್ರಧಾನ ಕಚೇರಿ, ಇಂದಿರಾ ಗಾಂಧಿ ಭವನ ಉದ್ಘಾಟನೆ ಕಾರ್ಯಕ್ರಮದ ಬಳಿಕ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ಭಾಗವತ್ ಇದೇ ಹೇಳಿಕೆಯನ್ನು ಬೇರೆ ದೇಶದಲ್ಲಿ ನೀಡಿದ್ದರೆ ಬಂಧಿಸಲಾಗುತ್ತಿತ್ತು. ಇಂತಹಅಸಂಬದ್ಧ’ ಮಾತುಗಳನ್ನು ಕೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ. ಎಲ್ಲಾ ಭಾರತೀಯರಿಗೆ ಅವಮಾನ ಅವರು ಮಾಡಿ ದೇಶದ್ರೋಹ ಎಸಗಿದ್ದಾರೆ ಎಂದು ಟೀಕಿಸಿದರು.
ಸಂವಿಧಾನ ಅಮಾನ್ಯವಾಗಿದೆ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವೂ ಅಮಾನ್ಯ ಎಂದು ಹೇಳುತ್ತಿದ್ದಾರೆ. ಇದನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನ ಅವರಿಗೆ ಇದೆ ಎಂದು ಹೇಳಿದರು.

Exit mobile version