ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

0
24

ಬಾಗಲಕೋಟೆ: ಪಂಚಾಯತ್ ರಾಜ್ ಇಲಾಖೆಯ ಬೀಳಗಿ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲೇಶ್ ದುರ್ಗದ ಎಂಬುವವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಗುರುವಾರ ಬೆಳ್ಳಂಬೆಳಿಗ್ಗೆ ಬಾಗಲಕೋಟೆಯ ಹಳೆವೀರಾಪುರ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದ ಅಧಿಕಾರಿಗಳ ತಂಡ ಆದಾಯಕ್ಕಿಂತ ಅಧಿಕ ಆಸ್ತಿಗಳಿಸಿರುವ ದೂರು ಹಿನ್ನೆಲೆಯಲ್ಲಿ ಪರಿಶೀಲನೆ ಕೈಗೊಂಡಿದೆ.

ಮಲ್ಲೇಶ ಅವರ ಸ್ವಗ್ರಾಮ ತಳ್ಳಿಕೇರಿ ನಿವಾಸದ ಮೇಲೆಯೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

Previous articleಮೂರುದಿನ ಅವರಿಗೆ ಫ್ರೀ ಮೂರುದಿನ ನಮಗೆ ಪುಗಸಟ್ಟೆ
Next articleನವಜಾತ ಶಿಶು ಮೃತದೇಹ ಪತ್ತೆ