ಕುಷ್ಟಗಿ: ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕಿಗೆ ದುಷ್ಕರ್ಮಿಗಳು ಸ್ಕೂಟಿ
ಬೈಕಿಗೆ ರವಿವಾರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಬೆಂಕಿ ಹಚ್ಚಿದ್ದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.
ಕುಮಾರ ರಾಠೋಡ್ ಅವರಿಗೆ ಸೇರಿದ ಹೊಂಡಾ ಎಕ್ಟೀವಾ ಸ್ಕೂಟಿಗೆ ದುಷ್ಕರ್ಮಿಗಳು ಬೆಂಕಿ ಹೆಚ್ಚಿದ್ದು ಧಗಧಗನೆ ಉರಿಯಲು ಆರಂಭಿಸಿದ್ದು ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು.ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬೈಕಿಗೆ ಹಚ್ಚಲಾಗಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೊತ್ತಿಗೆ ಬೈಕು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಕಂಡುಬಂದಿತ್ತು.