Home ತಾಜಾ ಸುದ್ದಿ ಬೆಳಗಾವಿ ಪ್ರಕರಣ: ಬಸ್‌ ನಿರ್ವಾಹಕ ಮೇಲೆ POCSO ಕೇಸ್

ಬೆಳಗಾವಿ ಪ್ರಕರಣ: ಬಸ್‌ ನಿರ್ವಾಹಕ ಮೇಲೆ POCSO ಕೇಸ್

0

ಬೆಳಗಾವಿ: ಮಾತೃ ಭಾಷಾ ಪ್ರೇಮಕ್ಕೆ ಮಗಳ ವಯಸ್ಸಿನ ಬಾಲಕಿಯಿಂದಲೇ ಪೋಕ್ಸೋ ಪ್ರಕರಣ ದಾಖಲಾಗಿದೆ.
ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಈಗ ನಿರ್ವಾಹಕ ಮಹಾದೇವ್‌ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿರ್ವಾಹಕ ಮಹಾದೇವ್‌ ನನಗೆ ದೂರು ನೀಡಿದ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ: ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಟಿಕೆಟ್‌ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ದರು. ಯುವತಿ ಎರಡು ಫ್ರೀ ಟಿಕೆಟ್‌ ಎಂದು ಹೇಳಿ ಟಿಕೆಟ್‌ ಪಡೆದಳು. ಯುವಕ ಟಿಕೆಟ್‌ ಪಡೆದಿರಲಿಲ್ಲ. ಮರಾಠಿಯಲ್ಲಿ ಮಾತನಾಡುತ್ತಿದ್ದವರಿಗೆ ಟೀಕೆಟ್‌ ವಿಚಾರವಾಗಿ ಕನ್ನಡದಲ್ಲಿ ಮಾತಾನಡುವಂತೆ ವಿನಂತಿ ಮಾಡಿದ್ದ ನಿರ್ವಾಹಕನಿಗೆ ಬಾಲಕಿ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ಮರಾಠಿಯಲ್ಲೇ ಬೈದಿದ್ದಾಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ 20 ಕ್ಕೂ ಹೆಚ್ಚು ಜನರು ನಿರ್ವಾಹಕ ಮೇಲೆ ಹಲ್ಲೆ ಮಾಡಿದ್ದರು.

ಠಾಣೆಗೆ ಮುತ್ತಿಗೆ: ಈ ಕೇಸ್ ದಾಖಲಿಸಿದ್ದಕ್ಕೆ ಪೊಲೀಸ್ ಆಯುಕ್ತ ರು ಸಿಪಿಐ ವಿರುದ್ಧ ಗರಂ ಆಗಿದ್ದು, ಏತನ್ಮಧ್ಯೆ ಕನ್ನಡ ಸಂಘಟನೆಗಳು ಮಾರಿಹಾಳ ಠಾಣೆಗೆ ಮುತ್ತಿಗೆ ಹಾಕಿದ್ದಾರೆ

Exit mobile version