Home ತಾಜಾ ಸುದ್ದಿ ಗ್ಯಾರಂಟಿ ನಿಲ್ಲಿಸಿಲ್ಲ, ವಿಳಂಬವಾಗಿದೆ

ಗ್ಯಾರಂಟಿ ನಿಲ್ಲಿಸಿಲ್ಲ, ವಿಳಂಬವಾಗಿದೆ

0

ಡಿಕೆ ಶಿವಕುಮಾರ್ ಇವಾಗ ಅಲ್ಲ, ಮೊದಲಿನಿಂದಲೂ ಸಿಎಂ ರೇಸ್‌ನಲ್ಲಿದಾರೆ

ಹುಬ್ಬಳ್ಳಿ: ಗ್ಯಾರಂಟಿ ನಿಲ್ಲಿಸಿಲ್ಲ, ವಿಳಂಬವಾಗಿದೆ. ಕೆಲವು ಸಲ ತಡವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾವು ಇದೇ ದಿನ ಕೊಡುತ್ತೇವೆ ಎಂದು ಹೇಳಿಲ್ಲ‌. ಸರಕಾರ ಅನ್ನೋದು ಸಮುದ್ರ ತರಹ. ಆದರೆ ನಾವು ಯಾವುದೇ ಗ್ಯಾರಂಟಿ ನಿಲ್ಲಿಸಿಲ್ಲ ಎಂದರು. ಡಿಕೆ ಶಿವಕುಮಾರ್ ಇವಾಗ ಅಲ್ಲ ಮೊದಲಿನಿಂದಲೂ ಸಿಎಂ ರೇಸ್‌ನಲ್ಲಿದಾರೆ. ಅದರಲ್ಲಿ ಪ್ರಶ್ನೆ ಇಲ್ಲ, ಇದಕ್ಕೆಲ್ಲ ವರಿಷ್ಠರ ನಿರ್ಧಾರ ತೆಗೆದುಕೊಳ್ಳಬೇಕು. ಅಧ್ಯಕ್ಷರ ಬದಾಲವಣೆ ಸಮಯಕ್ಕಾಗಿ ಕಾಯಬೇಕು, ಕಾದು ನೋಡೋಣ ಎಂದರು.‌

Exit mobile version