Home ತಾಜಾ ಸುದ್ದಿ ಬೆಳಗಾವಿ ಚಲೋ ಕೈ ಬಿಡಿ: ಸತೀಶ್​ ಜಾರಕಿಹೊಳಿ ಮನವಿ

ಬೆಳಗಾವಿ ಚಲೋ ಕೈ ಬಿಡಿ: ಸತೀಶ್​ ಜಾರಕಿಹೊಳಿ ಮನವಿ

0

ಬೆಳಗಾವಿ: ಬೆಳಗಾವಿ ಚಲೋ ಕೈ ಬಿಡಬೇಕು ಎಂದು ಸಚಿವ ಸತೀಶ್​ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎರಡೂ ಕಡೆಯ ಬಸ್​ಗಳಿಗೆ ಮಸಿ ಬಳಿಯುವ ಕೆಲಸವಾಗಿದೆ. ಕೊನೆಯದಾಗಿ ತೊಂದರೆ ಆಗುವುದು ಬೆಳಗಾವಿ ಮತ್ತು ಸರ್ಕಾರಕ್ಕೆ. ಇಂಥ ಘಟನೆಗಳು ನಡೆಯುವುದರಿಂದ ನೇರವಾಗಿ ಬೆಳಗಾವಿಗೆ ನಷ್ಟವಾಗುತ್ತದೆ. ಬೆಳೆಯುತ್ತಿರುವ ಬೆಳಗಾವಿಯನ್ನು ನಾವು ಪ್ರೋತ್ಸಾಹಿಸಬೇಕು. ಅದನ್ನು ಬಿಟ್ಟು ಇಂಥ ಘಟನೆಗಳಿಗೆ ಪ್ರೋತ್ಸಾಹಿಸಬಾರದು, ಕಂಡಕ್ಟರ್ ಮೇಲಿನ ಹಲ್ಲೆ ಘಟನೆ ಸಂಬಂಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಇಲ್ಲಿಗೆ ಯಾವುದೇ ಸಂಘಟನೆ ಬಂದರೂ ಹೊಡೆತ ಬೀಳುವುದು ನಮಗೆ. ಅದನ್ನು ಗಮನಿಸಬೇಕಾಗುತ್ತದೆ. ಹಾಗಾಗಿ, ಬೆಳಗಾವಿ ಚಲೋ ಕೈ ಬಿಡಬೇಕು” ಎಂದರು.

Exit mobile version