ಬುರ್ಖಾ ಧರಿಸಿ ತಿರುಗುತ್ತಿದವನಿಗೆ ಧರ್ಮ ದೇಟು

0
6

ಇಳಕಲ್ : ಬುರ್ಖಾ ಧರಿಸಿಕೊಂಡು ಬಗಲಲ್ಲಿ ಹಾಕಿದ ಚೀಲದಲ್ಲಿ ಚಾಕು ಚೂರಿ ಕುಡಗೋಲು ಹಾಕಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಜನರು ಹಿಡಿದು ವಿಚಾರಿಸಿ ಧರ್ಮದೇಟು ನೀಡಿದ ಪ್ರಸಂಗ ಶುಕ್ರವಾರದಂದು ನಡೆದಿದೆ.
ಸುಮಾರು ೩೫ ರಿಂದ ೪೦ ವಯಸ್ಸಿನ ಈ ವ್ಯಕ್ತಿ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಎಸಿಓ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹತ್ತಿರ ತಿರುಗುತ್ತಿದ್ದಾಗ ಜನರಿಗೆ ಅನುಮಾನ ಬಂದು ಬುರ್ಖಾ ತೆಗೆದು ವಿಚಾರಣೆ ಮಾಡಿದರೂ ಆ ವ್ಯಕ್ತಿ ಬಾಯಿ ಬಿಡದೇ ಹೋದಾಗ ಎಲ್ಲರೂ ಸೇರಿ ಹಾಕಿಕೊಂಡು ಬಡಿದಿದ್ದಾರೆ ನಂತರ ಕರೆಸಿ ಅವರ ವಶಕ್ಕೆ ಕೊಟ್ಟಿದ್ದಾರೆ. ಪೋಲಿಸ್ ಠಾಣೆಯಲ್ಲಿ ಬಾಯಿಬಿಟ್ಟ ವ್ಯಕ್ತಿ ತಾನು ವೀರಾಪೂರ ಗ್ರಾಮದ ಮಹಾಂತೇಶ ಎಂದು ಹೇಳಿದ್ದಾನೆ. ಅವನನ್ನು ಪೋಲಿಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Previous articleಭಾನುವಾರದಂದು ಬದಲಾದ ಸಮಯದಲ್ಲಿ ನಮ್ಮ ಮೆಟ್ರೋ
Next articleNEET ವಿವಾದ: ಸಿಬಿಐ ತನಿಖೆಗೆ ಒತ್ತಾಯ