Home ಅಪರಾಧ ಬುರ್ಖಾ ಧರಿಸಿದ ವ್ಯಕ್ತಿಯ ಬಂಧನ

ಬುರ್ಖಾ ಧರಿಸಿದ ವ್ಯಕ್ತಿಯ ಬಂಧನ

0
197

ಇಳಕಲ್: ಬುರ್ಖಾ ಧರಿಸಿಕೊಂಡು ಕೈಯಲ್ಲಿನ ಚೀಲದಲ್ಲಿ ಚಾಕೊಲೇಟ್, ಬಳೆ, ಹಗ್ಗಗಳನ್ನು ಮತ್ತು ಮುತ್ತಿನ ಸಾಮಾನುಗಳನ್ನು ಇಟ್ಟುಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಬುರ್ಖಾಧಾರಿ ವ್ಯಕ್ತಿಯನ್ನು ನೋಡಿ ಹಿಂದೂ ಟ್ರಸ್ಟ್ ಸಂಚಾಲಕ ಪರಶುರಾಮ ಬಿಸಲದಿನ್ನಿ ಅವನನ್ನು ಹಿಡಿದುಕೊಂಡು ಬಂದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಜಾವೀದ್ ಎಂಬ ಅರೆಮಾನಸಿಕ ವ್ಯಕ್ತಿಯನ್ನು ಬಂಧಿಸಿದ ಪೋಲಿಸರು ಅವನ ಬಳಿ ಬ್ಯಾಗಿನಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಪ್ರಕರಣವನ್ನು ಶಹರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಪಿಎಸ್‌ಐ ಷಹಜಹಾನ ನಾಯಕ ತನಿಖೆ ನಡೆಸಿದ್ದಾರೆ.